ರಾಜ್ಯ ಒಕ್ಕಲಿಗರ ಸಂಘಕ್ಕೆ 7.14 ಕೋಟಿ ತೆರಿಗೆ ವಾಪಸ್ – ಆದಾಯ ತೆರಿಗೆ ಇಲಾಖೆ, ಹಿತೈಷಿಗಳಿಗೆ ಧನ್ಯವಾದ ತಿಳಿಸಿದ ಸಂಘ!

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ 2016-17ನೇ ಆರ್ಥಿಕ ವರ್ಷದಲ್ಲಿ ಮಾರ್ಚ್ 2017ರಂದು ಪಾವತಿಸಿದ್ದ ಸುಮಾರು 5ಕೋಟಿ 14 ಲಕ್ಷ ಆದಾಯ ತೆರಿಗೆಯನ್ನು ವಾಪಸ್ ಬರುವಂತೆ ಕೋರಿ ಆದಾಯತೆರಿಗೆ ಇಲಾಖೆಯ ವಿರುದ್ಧ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ದಾಖಲಿಸಲಾಗಿತ್ತು.

ಸಂಘದ ವತಿಯಿಂದ ದಾಖಲಿಸಿದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಆದಾಯ ತೆರಿಗೆ ಇಲಾಖೆಯು, ಆ ಸಮಯದಲ್ಲಿ ಕಟ್ಟಿದ್ದ ಆದಾಯ ತೆರಿಗೆ 5 ಕೋಟಿ 14 ಲಕ್ಷಕ್ಕೆ ಬಡ್ಡಿ ಸೇರಿಸಿ ಸುಮಾರು 7 ಕೋಟಿ 14 ಲಕ್ಷಗಳನ್ನು ದಿನಾಂಕ 13-07-2025ರ ಭಾನುವಾರ ಸಂಘದ ಖಾತೆಗೆ ವಾಪಸ್ ಮಾಡಿದೆ.

ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದು, ಆದಾಯ ತೆರಿಗೆಯನ್ನು ಹಿಂಪಡೆಯಲು ಸಹಕರಿಸಿದ ಸಂಘದ ಹಿತೈಷಿಗಳು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾಯಾ, ವಾಚಾ, ಮನಸ್ಸಾ ದುಡಿಯೋಣ ಎಂದಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ಗೆ ನಂದಿತಾ ಶ್ವೇತಾ ಕಂಬ್ಯಾಕ್‌.. ‘ಬೆನ್ನಿ’ಯಾಗಿ ರೌದ್ರಾವತಾರ ತಾಳಿದ ‘ಜಿಂಕೆ ಮರಿ’!

Btv Kannada
Author: Btv Kannada

Read More