ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ್-ಧನ್ಯತಾ.. ಇಲ್ಲಿದೆ ನವಜೋಡಿಯ ಕ್ಯೂಟ್ ಫೋಟೋಸ್!

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ. ಸಾಂಸ್ಕೃತಿಕ ನಗರಿಯ ವಸ್ತು ಸಂಗ್ರಹಾಲಯ ಮೈದಾನದಲ್ಲಿ ನಡೆದ ಸಂಭ್ರಮದಲ್ಲಿ ಗುರು ಹಿರಿಯರು, ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಡಾಲಿ ಧನಂಜಯ ಅವರು ಧನ್ಯತಾ ಅವರಿಗೆ ತಾಳಿ ಕಟ್ಟಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೊಸಜೀವನಕ್ಕೆ ಕಾಲಿಟ್ಟ ನವಜೋಡಿಗೆ ಸಿನಿತಾರೆಯರು, ಗಣ್ಯರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದರು. ಗೋಲ್ಡ್ ಕಲರ್ ಸೀರೆಯಲ್ಲಿ ಧನ್ಯತಾ ಮತ್ತು ಗೋಲ್ಡ್ ಕಲರ್ ಶೇರ್ವಾನಿಯಲ್ಲಿ ಧನಂಜಯ್ ಮಿಂಚಿದರು. ಧನ್ಯತಾ ಕುಟುಂಬದಿಂದ ಧಾರೆ ಶಾಸ್ತ್ರದ ಬಳಿಕ ಮಾಂಗಲ್ಯ ಧಾರಣೆ ನಡೆಯಿತು. ಡಾಲಿ ಮದುವೆಗೆ ಕುಟುಂಬಸ್ಥರು, ಮಠಾಧೀಶರು ಹಾಗೂ ಆಪ್ತರು ಸಾಕ್ಷಿಯಾದರು. ಜೋಡಿಗೆ ಅಕ್ಷತೆ ಹಾಕಿ ಹರಸಿದರು.

ಗೋಲ್ಡ್ ಕಲರ್ ಸೀರೆಯಲ್ಲಿ ಧನ್ಯತಾ ಮತ್ತು ಗೋಲ್ಡ್ ಕಲರ್ ಶೇರ್ವಾನಿಯಲ್ಲಿ ಧನಂಜಯ್ ಮಿಂಚಿದರು. ಧನ್ಯತಾ ಕುಟುಂಬದಿಂದ ಧಾರೆ ಶಾಸ್ತ್ರದ ಬಳಿಕ ಮಾಂಗಲ್ಯ ಧಾರಣೆ ನಡೆಯಿತು. ಡಾಲಿ ಮದುವೆಗೆ ಕುಟುಂಬಸ್ಥರು, ಮಠಾಧೀಶರು ಹಾಗೂ ಆಪ್ತರು ಸಾಕ್ಷಿಯಾದರು. ಜೋಡಿಗೆ ಅಕ್ಷತೆ ಹಾಕಿ ಹರಸಿದರು.

ಡಾಲಿ ಮದುವೆಯಲ್ಲಿ ರಕ್ಷಿತಾ ಪ್ರೇಮ್, ಶಿವರಾಜ್‌ಕುಮಾರ್, ಶ್ರೀಮುರುಳಿ, ನಿರ್ದೇಶಕ ಪ್ರೇಮ್, ಅಮೂಲ್ಯ, ಮೇಘನಾ, ಸಪ್ತಮಿ ಗೌಡ, ವಸಿಷ್ಠ ಸಿಂಹ, ಕೆ.ಮಂಜು, ಕೆವಿನ್ ನಿರ್ಮಾಪಕರು, ಪ್ರಥಮ್, ರಂಗಾಯಣ ರಘು, ತೆಲುಗು ನಿರ್ದೇಶಕ ಸುಕುಮಾರ್ ಸೇರಿದಂತೆ ಎಲ್ಲ ನಟ-ನಟಿಯರು ಭಾಗಿಯಾಗಿದ್ದರು.

ಮದುವೆಯಲ್ಲಿ ಅಭಿಮಾಗನಿಗಳಿಗೆ ಸ್ಪೆಷಲ್ ಎಂಟ್ರಿ ಏರ್ಪಾಡು ಮಾಡಲಾಗಿತ್ತು. ಕರ್ನಾಟಕದ ರಾಜ್ಯಪಾಲರು, ಬಿ.ವೈ ವಿಜಯೇಂದ್ರ, ಜಮೀರ್ ಅಹ್ಮದ್, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ರಾಜಕೀಯ ಗಣ್ಯರು ಕೂಡ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಆಶೀರ್ವಾದ ಮಾಡಿದರು.

ಇದನ್ನೂ ಓದಿ : http://ಜೇಮ್ಸ್ ಬಾಂಡ್ ಆದ ಕಿಲಾಡಿ ರಾಜು.. ಸಿನಿಪ್ರಿಯರಿಂದ ‘ರಾಜು ಜೇಮ್ಸ್ ಬಾಂಡ್’ಗೆ ಭರ್ಜರಿ ರೆಸ್ಪಾನ್ಸ್!

Btv Kannada
Author: Btv Kannada

Read More