ಮೈಸೂರು : ಸರ್ಕಾರಿ ವಾಹನದಲ್ಲಿ ಎಣ್ಣೆ ಬಾಟಲಿಗಳು ಪತ್ತೆಯಾಗಿರುವ ಘಟನೆ ಮೈಸೂರಿನ ಹುಣಸೂರಿನ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ. ಸ್ಥಳೀಯರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ವಾಹನದಲ್ಲಿ 3 ಮದ್ಯದ ಬಾಟಲ್, ಸರ್ಕಾರಕ್ಕೆ ಸೇರಿದ ಕಡತಗಳು ಸಿಕ್ಕಿದೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ವಾಹನದಲ್ಲಿ ಎಣ್ಣೆ ಬಾಟಲಿಗಳು ಪತ್ತೆಯಾಗಿದ್ದು, ಅಷ್ಟೇ ಅಲ್ಲದೆ ಸರ್ಕಾರಿ ವಾಹನಕ್ಕೆ ಖಾಸಗಿ ವ್ಯಕ್ತಿ ಚಾಲಕನಾಗಿದ್ದ. ಟೌನ್ ಪೊಲೀಸರಿಗೆ KRS ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ಪರಿಶೀಲಿಸಿದ್ದಾರೆ.

ಪರಿಶೀಲನೆ ಬಳಿಕ ಹುಣಸೂರು ಟೌನ್ ಪೊಲೀಸರು ವಾಹನವನ್ನು ಸೀಜ್ ಮಾಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ವಕೀಲ ಉಜ್ವಲ್ ನಿಕಮ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ!
Author: Btv Kannada
Post Views: 2,491







