ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ಹಣ ವಸೂಲಿ ಕೇಸ್ – ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಶ್ರೀನಾಥ್ ಜೋಶಿ!

ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ಕೋಟಿ ಕೋಟಿ ಹಣ ವಸೂಲಿ ಮಾಡಿರುವ ಪ್ರಕರಣ ಸಂಬಂಧ ಶ್ರೀನಾಥ್ ಜೋಶಿ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ.

ಶ್ರೀನಾಥ್ ಜೋಶಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ನೋಟಿಸ್ ನೀಡಿತ್ತು. ಇನ್ನು ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು ಶ್ರೀನಾಥ್ ಜೋಶಿಗೆ ನೋಟಿಸ್ ನೀಡಿದ್ದರು. ನೋಟಿಸ್‌ ನೀಡಿದ ದಿನದಿಂದ 10 ದಿನಗಳ ಒಳಗೆ ತನಿಖೆಗೆ ಹಾಜರಾಗಬೇಕು ಎಂದು ಶ್ರೀನಾಥ್‌ ಜೋಶಿಗೆ ನಿರ್ದೇಶಿಸಿದ್ದರು.

ಲೋಕಾಯುಕ್ತ ನೋಟಿಸ್ ಬೆನ್ನಲ್ಲೇ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಹಿಂದೆ ಶ್ರೀನಾಥ್ ಜೋಶಿ ಬೆಂಗಳೂರು ಲೋಕಾಯುಕ್ತ SPಯಾಗಿದ್ದರು. ಇದೇ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನಿಂಗಪ್ಪ ಎಂಬ ವ್ಯಕ್ತಿಯನ್ನೂ ಬಂಧಿಸಿದ್ದರು.

ಇದನ್ನೂ ಓದಿ : ಚಿತ್ರರಂಗಕ್ಕೆ ಮತ್ತೊಂದು ಆಘಾತ.. ಹಿರಿಯ ನಟ ಕೋಟ ಶ್ರೀನಿವಾಸ ರಾವ್ ವಿಧಿವಶ!

Btv Kannada
Author: Btv Kannada

Read More