ಬೆಂಗಳೂರು : ಕಿದ್ವಾಯಿ ಮಾಜಿ ಡೈರೆಕ್ಟರ್ ಸೇರಿ ಹಲವರಿಗೆ ವಕ್ರದೆಸೆ ಶುರುವಾಗಿದೆ. ಕೋವಿಡ್ RT-PCR ಟೆಸ್ಟ್ನಲ್ಲೇ ಬರೋಬ್ಬರಿ 125 ಕೋಟಿ ರೂ. ಲೂಟಿ ಮಾಡಿರೋದು ಇದೀಗ ಬೆಳಕಿಗೆ ಬಂದಿದೆ. ಕಿದ್ವಾಯಿಯ ಮಾಜಿ ಟೀಂ ಕೋವಿಡ್ ಟೆಸ್ಟ್ ಮಾಡದೇ ಸರ್ಕಾರದ ಹಣವನ್ನ ಲೂಟಿ ಹೊಡೆದಿದ್ದು, ಈ ಸಂಬಂಧ ಕಿದ್ವಾಯಿಯ ಹಿಂದಿನ ನಿರ್ದೇಶಕ ಡಾ. ಸಿ. ರಾಮಚಂದ್ರ ಮತ್ತು ಹೊರಗುತ್ತಿಗೆ ಸಂಸ್ಥೆ BMS ಮೇಲೆ ಶೀಘ್ರವೇ ಲೂಟಿ ಕೇಸ್ ದಾಖಲಾಗಲಿದೆ.

ಜಸ್ಟೀಸ್ ಕುನ್ಹಾ ವರದಿ ಆಧರಿಸಿ ಕಿದ್ವಾಯಿಯ ಈಗಿನ ಡೈರೆಕ್ಟರ್ ನವೀನ್ ಭಟ್ ಅವರು ಬೆಂಗಳೂರು ಸಿದ್ಧಾಪುರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ನಿಯಮ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಸಂಬಂಧ ದೂರು ನೀಡಲಾಗಿದೆ. ಖದೀಮರು RNA ಮತ್ತು DNA ಟೆಸ್ಟ್ ಹೆಸರಲ್ಲಿ ಸರ್ಕಾರದ ಬೊಕ್ಕಸ ದೋಚಿದ್ದು, ಕಿದ್ವಾಯಿ ಮಾಜಿ ಡೈರೆಕ್ಟರ್ ರಾಮಚಂದ್ರರ ಜೊತೆ BMS ಕಂಪನಿಯ ಮಾಲೀಕ S.P ರಕ್ಷಿತ್ ಪಾತ್ರವೂ ಕೂಡ ಬಟಾಬಯಲಾಗಿದೆ.
ಈ ಹೊರಗುತ್ತಿಗೆ ಕಂಪನಿ BMS ಹೆಸರಲ್ಲಿ S.P ರಕ್ಷಿತ್ ಕೋಟಿ ಕೋಟಿ ಲೂಟಿ ಹೊಡೆದಿದ್ದು, ಕೊರೋನಾ ನೋಡ್ಕೊಂಡೇ ಬೆಂಗಳೂರು ಮೆಡಿಕಲ್ ಸಿಸ್ಟಮ್ (BMS) ಎಂಬ ಕಂಪನಿಯನ್ನು ತೆರೆದಿದ್ದ. ಬೆಂಗಳೂರು ಮೆಡಿಕಲ್ ಆವರಣದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳೊ ರಕ್ಷಿತ್, ಮಾಜಿ ಸಿಎಂ ಒಬ್ಬರ ಸಂಬಂಧಿಯೂ ಹೌದಂತೆ. ಈತ ಥರ್ಮೋ ಎಂಬ ಕಂಪನಿಯಲ್ಲಿ ಕೆಲಸ ಮಾಡಿಕೊಂಡು BMCಗೆ ಕೋವಿಡ್ ಇನ್ಸ್ಟ್ರುಮೆಂಟ್ಸ್ಗಳನ್ನ ತಂದು ಅಳವಡಿಸ್ತಿದ್ದ.
ಹೀಗಿದ್ದವ್ನು ಬಳಿಕ BMCಯ ಹಿರಿಯ ಅಧಿಕಾರಿಗಳನ್ನ ಬುಟ್ಟಿಗೆ ಹಾಕಿಕೊಂಡಿದ್ದ. ಮೊದಲಿಗೆ ಚೀನಾದಿಂದ ಬರುವಂತಹ ವ್ಯಕ್ತಿಗಳ ಕೋವಿಡ್ ಪರೀಕ್ಷೆಯನ್ನ BMCಯಲ್ಲಿ ಮಾಡಲಾಗ್ತಿತ್ತು. ಯಾವಾಗ ಕೋವಿಡ್ ಪೀಕ್ ಲೆವೆಲ್ಗೆ ಹೋಯ್ತೋ ಆಗ್ಲೇ ಈ ರಕ್ಷಿತ್ ಫುಲ್ ಆ್ಯಕ್ಟಿವ್ ಆಗಿದ್ದಾನೆ. ತಾನೇ BMS ಎಂಬ ಕಂಪನಿಯನ್ನ ಹುಟ್ಟುಹಾಕಿ ನಂತರ ಕಿದ್ವಾಯಿ ಆಸ್ಪತ್ರೆಯ ಡೈರೆಕ್ಟರ್ ರಾಮಚಂದ್ರರನ್ನ ಸೆಟ್ ಮಾಡಿಕೊಂಡಿದ್ದ. BSC, MSC ಮಾಡಿದ ಹುಡುಗ್ರನ್ನ ಕರ್ಕೊಂಡ್ ಬಂದು ಟೆಸ್ಟಿಂಗ್ಗಾಗಿ ಕೂರಿಸ್ತಿದ್ದ.
ಇನ್ನು, ಕೋವಿಡ್ ಇನ್ಸ್ಟ್ರುಮೆಂಟ್ಸ್ಗಳ ಸಪ್ಲೈ ಮಾಡೋದ್ರಲ್ಲೂ ರಕ್ಷಿತ್ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾನೆ ಎನ್ನಲಾಗಿದೆ. ಕಿದ್ವಾಯಿಯ ಈಗಿನ ಡೈರೆಕ್ಟರ್ ನವೀನ್ ಭಟ್ ಅವರು ಸಿದ್ಧಾಪುರ ಠಾಣೆಗೆ ನೀಡಿರುವ ದೂರಿನಲ್ಲಿ ಈ ಎಲ್ಲವನ್ನೂ ಉಲ್ಲೇಖಿಸಲಾಗಿದೆ. ಈ ಸಂಬಂಧ ನಾಲ್ಕೈದು ದಿನದಲ್ಲಿ FIR ಕೂಡ ಆಗಲಿದ್ದು, ಈ ವೇಳೆ ಡಾ. ಸಿ ರಾಮಚಂದ್ರ ಹಾಗೂ ರಕ್ಷಿತ್ನ ಅಸಲಿಯತ್ತು ಹೊರಬೀಳಲಿದೆ.
ಇದನ್ನೂ ಓದಿ : ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ‘ಜೂನಿಯರ್’.. ಜುಲೈ 18ಕ್ಕೆ ಕಿರೀಟಿ ಸಿನಿಮಾ ರಿಲೀಸ್!







