ಡಿಕೆಶಿಗೆ MLAಗಳ ಸಪೋರ್ಟ್ ಇಲ್ಲ.. ಐದು ವರ್ಷವೂ ನಾನೇ ಸಿಎಂ – ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!

ಬೆಂಗಳೂರು : ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಡಿಕೆಶಿಗೆ MLAಗಳ ಸಪೋರ್ಟ್ ಇಲ್ಲ. 5 ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಇದೀಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಕೇಂದ್ರ ಸಚಿವರು ಹಾಗೂ ಹೈಕಮಾಂಡ್‌ನ ನಾಯಕರನ್ನು ಭೇಟಿಯಾಗಲು ರಾಷ್ಟ್ರ ರಾಜಧಾನಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ, ‘ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದು ಪುನರುಚ್ಚರಿಸಿದ್ದಾರೆ. ಡಿಕೆಶಿಗೆ ಹೆಚ್ಚು ಶಾಸಕರ ಬೆಂಬಲವಿಲ್ಲ, 2023ರ ರೀತಿಯಲ್ಲಿ 2028ರ ಚುನಾವಣೆಯಲ್ಲೂ ನನ್ನದೇ ನಾಯಕತ್ವ ಎಂದು ಘೋಷಿಸಿದ್ದಾರೆ.

‘ನಾನು ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ. ಇದನ್ನು ಜುಲೈ 2ರಂದು ಸ್ಪಷ್ಟಪಡಿಸಿದ್ದೇನೆ. ಆಗ ಡಿ.ಕೆ. ಶಿವಕುಮಾರ್ ಅವರೂ ಇದ್ದರು. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವೆಂದು ಖುದ್ದು ಶಿವಕುಮಾರ್ ಅವರೇ ಹೇಳಿದ್ದಾರೆ’ ಎಂದರು.

ನಾಯಕತ್ವ ಬದಲಾವಣೆ ಸಂಬಂಧ ಸುರ್ಜೇವಾಲಾ ಅವರು ಶಾಸಕರಿಗೆ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಸಿಎಂ ಬದಲಾವಣೆ ಸಂಬಂಧ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿಲ್ಲ ಎಂದು ಸುರ್ಜೇವಾಲಾ ಅವರೇ ಸ್ಪಷ್ಟಪಡಿಸಿದ್ದಾರೆ. ಅವರೇ ಅಲ್ಲಗಳೆದ ಮೇಲೆ, ಈ ವಿಷಯದಲ್ಲಿ ಊಹಾಪೋಹಗಳಿಗೆ ಆಸ್ಪದ ಇಲ್ಲ. ಈ ಊಹಾಪೋಹಗಳನ್ನು ಸೃಷ್ಟಿಸಿರುವುದು ಮಾಧ್ಯಮದವರೇ ಹೊರತು, ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಚರ್ಚೆಯೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ಸಿಎಂ ತವರು ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ.. ಆಟೋದಲ್ಲಿ ಹೋಗ್ತಿದ್ದ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

 

 

Btv Kannada
Author: Btv Kannada

Read More