ದಾವಣಗೆರೆ : ಮನೆ ಕಟ್ಟುವ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಈ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮ ಠಾಣಾ ಜಾಗದಲ್ಲಿ ಪ್ರತಿಭಾ ಮತ್ತು ಮಲ್ಲಿಕಾರ್ಜುನ್ ದಂಪತಿ ಮನೆ ಕಟ್ಟುತ್ತಿದ್ದರು. ಆದರೆ, ಈ ಜಾಗ ತಮ್ಮದೆಂದು ಗುರುಸಿದ್ದಪ್ಪ, ವೀರೇಶ್ ಮತ್ತು ಶರಣಪ್ಪ ಅಡ್ಡಿಪಡಿಸಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಮ್ಮುಖದಲ್ಲಿ ಜಾಗ ಅಳತೆ ಮಾಡುವಾಗ ಎರಡೂ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ವೀರೇಶ್, ಗುರುಸಿದ್ದಪ್ಪ, ಶರಣಪ್ಪ ಅವರು ಪ್ರತಿಭಾ ಮತ್ತು ಮಲ್ಲಿಕಾರ್ಜುನ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ದಂಪತಿಯನ್ನು ತಕ್ಷಣ ಜಗಳೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬಿಳಚೋಡು ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬೆಟ್ಟಿಂಗ್ ಆ್ಯಪ್ ಪ್ರಚಾರ – ಪ್ರಕಾಶ್ ರಾಜ್, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಕೇಸ್!







