ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ 10 ಕೋಟಿ ನಷ್ಟ – ರಾಜ್ಯ ಗೃಹ ಮಂಡಳಿಯ AEE ಸೇರಿ ಮೂವರು ‘ಲೋಕಾ’ ಬಲೆಗೆ!

ಬೆಂಗಳೂರು : ಸರ್ಕಾರಕ್ಕೆ 10 ಕೋಟಿ ರೂ. ನಷ್ಟ ಉಂಟು ಮಾಡಿದ್ದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ಗೃಹ ಮಂಡಳಿ AEE ಸೈಯದ್ ಅಜ್ಗರ್, ಗೋವಿಂದಯ್ಯ, ಹರಿಣಿ ಬಂಧಿತ ಆರೋಪಿಗಳು.

ಕರ್ನಾಟಕ ಗೃಹ ಮಂಡಳಿ AEE ಸೈಯದ್ ಅಜ್ಗರ್
ಕರ್ನಾಟಕ ಗೃಹ ಮಂಡಳಿ AEE ಸೈಯದ್ ಅಜ್ಗರ್

ಬಂಧಿತ ಮೂವರು ಆರೋಪಿಗಳು ಯಲಹಂಕ ನ್ಯೂಟೌನ್ ಸೈಟ್ ನಂಬರ್ 271 ಎ. ಸೆಕ್ಟರ್​ಗೆ ಸಂಬಂಧಿಸಿದಂತೆ ದಾಖಲೆ ಸೃಷ್ಟಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದರು. ಈ ಸಂಬಂಧ ದಾಖಲೆಗಳ ಸಮೇತ ಲೋಕಾಗೆ ಕೆ.ಎಸ್ ಚಂದ್ರಶೇಖರ್ ಎಂಬವರು ದೂರು ನೀಡಿದ್ದರು.

ಗೋವಿಂದಯ್ಯ
ಗೋವಿಂದಯ್ಯ

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಲೋಕಾ ಪೊಲೀಸರು, ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೈಟಿಗೆ ಸಂಬಂಧಿಸಿದ ದಾಖಲೆಗಳನ್ನ ವಶಕ್ಕೆ ಪಡೆದು AEE ಸೈಯದ್ ಅಜ್ಗರ್, ಗೋವಿಂದಯ್ಯ, ಹರಿಣಿಯನ್ನು ಬಂಧಿಸಿದ್ದಾರೆ. ಲೋಕಾ ಡಿವೈಎಸ್ಪಿಗಳಾದ ಪ್ರದೀಪ್ ಕುಮಾರ್, ವಸಂತು, ವಿಶ್ವನಾಥ್ ದುಂಡಪ್ಪ ನೇತೃತ್ವದಲ್ಲಿ ಕಾರ್ಯಚರಣೆ  ನಡೆಸಲಾಗಿದೆ.

ಇದನ್ನೂ ಓದಿ : ಬರೋಬ್ಬರಿ 77 ಲಕ್ಷ ರೂ. ವಂಚನೆ – ನಟಿ ಆಲಿಯಾ ಭಟ್‌ ಮಾಜಿ ಆಪ್ತ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್​​!

Btv Kannada
Author: Btv Kannada

Read More