ಪತ್ನಿ ಜೊತೆ ಅಕ್ರಮ ಸಂಬಂಧ ಶಂಕೆ – ಪ್ರಾಣಕ್ಕೆ ಪ್ರಾಣ ಕೊಡ್ತೇನೆ ಅಂತಾ ಹೇಳ್ತಿದ್ದ ಸ್ನೇಹಿತನನ್ನೇ ಹತ್ಯೆಗೈದ ಪಾಪಿ ಗೆಳೆಯ!

ಕಲಬುರಗಿ : ಪ್ರಾಣಕ್ಕೆ ಪ್ರಾಣ ಕೊಡ್ತೇನೆ ಅಂತಾ ಹೇಳ್ತಿದ್ದ ಆಪ್ತ ಸ್ನೇಹಿತನನ್ನೇ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ನಡೆದಿದೆ. ಅಂಬರೀಶ್ (28) ಸ್ನೇಹಿತನಿಂದಲೇ ಕೊಲೆಯಾದ ಯುವಕ.

ಹೌದು.. ಪ್ರಾಣಕ್ಕೆ ಪ್ರಾಣ ಕೊಡ್ತೇನೆ ಅಂತಾ ಹೇಳ್ತಿದ್ದ ಸ್ನೇಹಿತನನ್ನು ಬೆಂಗಳೂರಿನಿಂದ ಕಲಬುರಗಿಗೆ ಕರೆತಂದು ವೈಯರ್​ನಿಂದ ಬಿಗಿದು ಕೊಲೆ ಮಾಡಲಾಗಿದೆ. ಅಂಬರೀಶ್ ಸ್ನೇಹಿತ ಅಜಯ್ ಮತ್ತು ಆತನ‌ ಸ್ನೇಹಿತರು ಸೇರಿ ಈ ಕೃತ್ಯವೆಸಗಿದ್ದಾರೆ.

ಅಂಬರೀಶ್
ಅಂಬರೀಶ್

ಅಜಯ್ ಪತ್ನಿ ಜೊತೆ ಅಂಬರೀಶ್ ಅಕ್ರಮ ಸಂಬಂಧ ಶಂಕೆ ಹಿನ್ನಲೆ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಜಯ್ ತನ್ನ ಹೆಂಡತಿಯನ್ನ ನನ್ನ ಜೊತೆ ಇರೋದಕ್ಕೆ ಹೇಳುವಂತೆ ಬಾ ಅಂತಾ ಅಂಬರೀಶ್​​ನ್ನು ಕರೆತಂದಿದ್ದ. ಅಜಯ್ ಕಲಬುರಗಿಯಿಂದ‌ ಬೆಂಗಳೂರಿಗೆ ಹೋಗಿ ಅಂಬರೀಶ್ ನನ್ನ ಕರೆದುಕೊಂಡು ಬಂದಿದ್ದ.

ಮುರಡಿ ಗ್ರಾಮಕ್ಕೆ ಕರೆತಂದು ಅಜಯ್ ಇನ್ನುಳಿದ ಸ್ನೇಹಿತರ ಜೊತೆ ಸೇರಿಕೊಂಡು ಅಂಬರೀಶ್​​ನನ್ನು​​ ಕೊಲೆ ಮಾಡಲಾಗಿದೆ. ಕೊಲೆಯ ಬಳಿಕ ಅಜಯ್‌ ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದಾನೆ. ಸ್ನೇಹಿತನನ್ನೇ ಕೊಲೆ ಮಾಡಿರೋದಾಗಿ ಅಜಯ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಅಜಯ್ ಶರಣಾಗಿದ್ದಾನೆ. ಘಟನಾ ಸಂಬಂಧ ಸದ್ಯ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಆರ್​​ಸಿಬಿಯೇ ಕಾರಣ – CID ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು!

Btv Kannada
Author: Btv Kannada

Read More