ಬೆಂಗಳೂರು : ಭ್ರಷ್ಟ ಅಧಿಕಾರಿ ಕೆ.ಸಿ.ಜಯರಾಮಯ್ಯ ವಿರುದ್ಧ ಒಂದೇ ಮಾತರಂ ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸಿ.ಎಂ. ಶಿವಕುಮಾರ್ ನಾಯಕ್ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹಾಲಿ ಕೈಮಗ್ಗ ನಿಗಮ ನಿಯಮಿತ-ಪೀಣ್ಯದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕೆ.ಸಿ.ಜಯರಾಮಯ್ಯ ಎಂಬುವವರು ಈ ಹಿಂದೆ 2022-2023ನೇ ಸಾಲಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಾಗಲಕೋಟೆ ಶಾಖೆಯಲ್ಲಿದ್ದಾಗ, ಸದರಿ ನಿಗಮ ಹಾಗೂ ಇನ್ನಿತರೆ ನಿಗಮಗಳಿಂದ ಕಾರು ಸಾಲ, ನೇರಸಾಲ, ಕುರಿಸಾಲ, ಇತ್ಯಾದಿ ಸಾಲಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿಕೊಂಡು ಅನೇಕ ಮಹಿಳೆಯರಿಗೆ ಹಾಗೂ ಗ್ರಾಮೀಣ ಅನಕ್ಷರಸ್ಥರಿಂದ ಸುಮಾರು ರೂ.21.00 ಲಕ್ಷಕ್ಕೂ ಅಧಿಕ ಹಣವನ್ನು ಪಡೆದುಕೊಂಡಿದ್ದಾರೆ.

ಆರೋಪಿ ಕೆ.ಸಿ.ಜಯರಾಮಯ್ಯ ಹಾಗೂ ದಲ್ಲಾಳಿ ನರಸಿಂಹ ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡು, ಮುಖ್ಯಮಂತ್ರಿಗಳ, ಉಪಮುಖ್ಯಮಂತ್ರಿಗಳ ಹಾಗೂ ಇತರೆ ಸಚಿವರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಗ್ಧ ಜನರಿಗೆ ಸಾಲಸೌಲಭ್ಯ ಒದಗಿಸುವುದಾಗಿ ಸುಳ್ಳು ನಂಬಿಸಿ, ಹಣವನ್ನು ಪಡೆದು ನಂಬಿಕೆದ್ರೋಹ, ವಂಚನೆ, ಮೋಸ ಮಾಡಿದ್ದಲ್ಲದೆ ಹಣವನ್ನು ಹಿಂತಿರುಗಿಸದೆ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಿ.ಎಂ. ಶಿವಕುಮಾರ್ ನಾಯಕ್ ಅವರು ಕೋರಿದ್ದಾರೆ. ಇನ್ನು ವಂಚನೆಗೊಳಗಾದವರಿಗೆ ಹಣವನ್ನು ವಾಪಸ್ಸು ಕೊಡಿಸುವಂತೆ ಹಾಗೂ ಜೀವರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಜನೌಷಧ ಕೇಂದ್ರಗಳ ಸ್ಥಗಿತಕ್ಕೆ ಹೈಕೋರ್ಟ್ ತಡೆ!







