ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ವಿದೇಶಕ್ಕೆ ಪ್ರಯಾಣಿಸಲು ಕೋರ್ಟ್ ಅನುಮತಿ ನೀಡಿದೆ. ಡೆವಿಲ್ ಸಿನಿಮಾ ಶೂಟಿಂಗ್ಗಾಗಿ ವಿದೇಶಕ್ಕೆ ತೆರಳಲು ಅವಕಾಶ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಇದೀಗ ಥೈಲ್ಯಾಂಡ್‌ಗೆ ತೆರಳಲು 57ನೇ ಸೆಷನ್ಸ್ ಕೋರ್ಟ್ ಅವಕಾಶ ನೀಡಿದೆ.

ಜುಲೈ 11 ರಿಂದ 30 ವರೆಗೆ ಥೈಲ್ಯಾಂಡ್ನಲ್ಲಿ ಚಿತ್ರಿಕರಣಕ್ಕೆ 57ನೇ ಸೆಷನ್ಸ್ ಕೋರ್ಟ್ ಅನುಮತಿ ಕೊಟ್ಟಿದೆ. ಇನ್ನು ಇಸ್ರೇಲ್ನಲ್ಲಿ ಯುದ್ದದ ವಾತಾವರಣ ಹಿನ್ನಲೆ ಚಿತ್ರತಂಡ ದುಬೈ ಪ್ರಯಾಣ ರದ್ದು ಮಾಡಿದೆ.
ಡೆವಿಲ್ ಸಿನಿಮಾದ ಶೆಡ್ಯೂಲ್ ಈ ಹಿಂದೆ ಉದಯಪುರದಲ್ಲಿ ನಡೆದಿತ್ತು. ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಇತ್ತೀಚೆಗಷ್ಟೇ ರಿಲೀಸ್ ಮಾಡಿತ್ತು. ದಸರಾದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಅನಧಿಕೃತ ಆಟೋಗಳ ವಿರುದ್ಧ ಸಮರ – ಲಾಯರ್ ಜಗದೀಶ್ಗೆ ಚಾಲಕನಿಂದ ಬೆದರಿಕೆ.. ದೂರು ದಾಖಲು!
Author: Btv Kannada
Post Views: 2,882







