ಚಿನ್ನಸ್ವಾಮಿ ಕಾಲ್ತುಳಿತಕ್ಕೆ KSCA, ಪೊಲೀಸರ ನಿರ್ಲಕ್ಷ್ಯವೇ ಕಾರಣ? – ಶೀಘ್ರದಲ್ಲಿ ಸರ್ಕಾರಕ್ಕೆ ತನಿಖಾಧಿಕಾರಿ DC ಜಗದೀಶ್ ವರದಿ ಸಲ್ಲಿಕೆ!

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ RCB ವಿಜಯೋತ್ಸವದ ವೇಳೆ ಭಾರೀ ಕಾಲ್ತುಳಿತ ಸಂಭವಿಸಿತ್ತು. ಈ ಭೀಕರ ಕಾಲ್ತುಳಿತ ದುರಂತದಲ್ಲಿ 11 ಜನರ ಸಾವನಪ್ಪಿದ್ದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ ವರದಿ ನೀಡುವಂತೆ ಸರ್ಕಾರ ಬೆಂಗಳೂರು ಡಿಸಿ ಜಿ. ಜಗದೀಶ್​ಗೆ ಸೂಚನೆ ನೀಡಿತ್ತು. ಹಾಗಾಗಿ ಕೇಸ್ ಸಂಬಂಧ ಡಿಸಿ ಜಿ. ಜಗದೀಶ್ ಅವರು ಸಂಪೂರ್ಣ ತನಿಖೆ ನಡೆಸಿದ್ದು, ಇದೀಗ ಎಲ್ಲರ ಚಿತ್ತ ಡಿಸಿ ವರದಿಯತ್ತ ನೆಟ್ಟಿದೆ. 

ಡಿಸಿ ಜಿ. ಜಗದೀಶ್ ನೇತೃತ್ವದ ಮ್ಯಾಜಿಸ್ಟ್ರೇಟ್ ತನಿಖೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಡಿಸಿ ಜಗದೀಶ್ ಅವರು ಸರ್ಕಾರಕ್ಕೆ ತನಿಖಾ ರಿಪೋರ್ಟ್ ಸಲ್ಲಿಸಲಿದ್ದಾರೆ. ಡಿಸಿ ಜಗದೀಶ್ ಅವರು ಇನ್ನು ಒಂದೆರಡು ದಿನದಲ್ಲಿ ಸರ್ಕಾರಕ್ಕೆ ಸುದೀರ್ಘ ವರದಿಯನ್ನ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. 

ಡಿಸಿ ಜಗದೀಶ್ ಅವರು ಈ ಕೇಸ್ ಸಂಬಂಧವಾಗಿ ಐಪಿಎಸ್ ಬಿ. ದಯಾನಂದ್ ಸೇರಿ ಹಲವು ಪೊಲೀಸ್ ಅಧಿಕಾರಿಗಳ ವಿಚಾರಣೆ ಮಾಡಿದ್ದರು. ಇನ್ನು ತನಿಖಾಧಿಕಾರಿಗಳು ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಡಿಸಿ ಜಗದೀಶ್ ಅವರು ದುರಂತಕ್ಕೆ ನಿಖರ ಕಾರಣ ಪತ್ತೆ ಹಚ್ಚಿದ್ದು, ಕೆಎಸ್ಸಿಎ ಹಾಗೂ ಪೊಲೀಸ್ ಅಧಿಕಾರಿಗಳ ಲೋಪಗಳನ್ನೂ ಪತ್ತೆ ಮಾಡಿದ್ದಾರೆ. ಇದೀಗ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ಘಟನೆ ಸಂಬಂಧದ ಪೂರ್ಣ ಪ್ರಮಾಣದ ವರದಿ ಸಲ್ಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ತಮಿಳುನಾಡಲ್ಲಿ ಸ್ಕೂಲ್​​ ಬಸ್​ಗೆ ರೈಲು ಡಿಕ್ಕಿ.. 3 ವಿದ್ಯಾರ್ಥಿಗಳು ಸಾವು, ಹಲವರು ಗಂಭೀರ!

Btv Kannada
Author: Btv Kannada

Read More