ಬೆಂಗಳೂರಲ್ಲಿ ಅನಧಿಕೃತ ಆಟೋಗಳ ವಿರುದ್ಧ ಸಮರ – ಲಾಯರ್ ಜಗದೀಶ್​ಗೆ ಚಾಲಕನಿಂದ ಬೆದರಿಕೆ.. ದೂರು ದಾಖಲು!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅನಧಿಕೃತವಾಗಿ ಸಂಚಾರ ಮಾಡ್ತಿದ್ದ ಒಂದೇ ನಂಬರ್​ನ 8 ಆಟೋಗಳ ಚಿತ್ರಗಳ ಸಮೇತ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದ ಲಾಯರ್ ಜಗದೀಶ್​ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಹಿನ್ನೆಲೆ ಲಾಯರ್ ಜಗದೀಶ್ ಅವರು ಬೆಂಗಳೂರು ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅನಧಿಕೃತ ಆಟೋ ಓಡಾಟದ ಸಂಬಂಧ ಲಾಯರ್ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಈ ಸಂಬಂಧ RTO ಹಾಗೂ ಪೊಲೀಸರು 900 ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರು 500 ಆಟೋಗಳನ್ನ ಕೂಡ ಸೀಜ್ ಮಾಡಿದ್ದರು. ಹಾಗಾಗಿ ಲಾಯರ್ ಜಗದೀಶ್ ಹಾಗೂ ಕುಟುಂಬದವರ ಮೇಲೆ ಅವಾಚ್ಯ ಶಬ್ಧ ಬಳಸಿ ಆಟೋ ಚಾಲಕನೊಬ್ಬ ವಿಡಿಯೋ ಹರಿಬಿಟ್ಟಿದ್ದಾನೆ.

ಆಟೋ ಚಾಲಕ ಕೆ.ಎ 03 7459 ನಂಬರಿನ ಆಟೋ ಮುಂಭಾಗ ನಿಂತು ಲಾಯರ್ ಜಗದೀಶ್​ಗೆ​ ಆವಾಜ್ ಹಾಕಿದ್ದ. ಇದೀಗ ಲಾಯರ್ ಜಗದೀಶ್, ಆಟೋ ಚಾಲಕನ ಮೇಲೆ ಬೆಂಗಳೂರು ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಕಾಲ್ತುಳಿತ ಕೇಸ್ – ಡಿಸಿ ಜಿ. ಜಗದೀಶ್ ನೇತೃತ್ವದ ಮ್ಯಾಜಿಸ್ಟ್ರೇಟ್ ತನಿಖೆ ಪೂರ್ಣ.. ಶೀಘ್ರದಲ್ಲೇ ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಕೆ!

Btv Kannada
Author: Btv Kannada

Read More