ಹಳೇ ಚಾಳಿ ಮುಂದುವರೆಸಿದ ಪಾಲಿಕೆ.. BBMP ಶಾಲೆ ಆರಂಭವಾಗಿ ತಿಂಗಳು ಕಳೆದ್ರೂ ಮಕ್ಕಳಿಗಿಲ್ಲ ಶೂ, ಸಮವಸ್ತ್ರ ಭಾಗ್ಯ!

ಬೆಂಗಳೂರು : ಬೇಸಿಗೆ ಕಳೆದು ಶಾಲೆಗಳು ಆರಂಭವಾಗಿ ಒಂದು ತಿಂಗಳು ಕಳೆದರೂ BBMP ಶಾಲಾ ಮಕ್ಕಳಿಗೆ ಸಮವಸ್ತ್ರಶೂ, ಸಾಕ್ಸ್​​​ ಇದುವರೆಗೂ ವಿತರಣೆಯಾಗಿಲ್ಲ. ಇದಕ್ಕೆ ಕಾರಣ ಟೆಂಡರ್​ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದು. ಬಿಬಿಎಂಪಿ ಶೂ ಮತ್ತು ಸಮವಸ್ತ್ರದ ಟೆಂಡರ್ ಜೂನ್​ನಲ್ಲೇ ಕರೆದಿದೆ. ಈ ಟೆಂಡರ್ ಪಡೆಯಲು ಕಂಪನಿಗಳು ಮುಂದೆ ಬಂದಿವೆ. ಆದರೆ, ಯಾವ ಕಂಪನಿಗೆ ಟೆಂಡರ್ ನೀಡಬೇಕೆಂದು ಬಿಬಿಎಂಪಿ ಇನ್ನೂ ಅಂತಿಮಗೊಳಿಸಿಲ್ಲ. ಹೀಗಾಗಿ, ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆಯಾಗಿಲ್ಲ. ಸದ್ಯ, ವಿದ್ಯಾರ್ಥಿಗಳು ಹಳೆಯ ಶೂ ಮತ್ತು ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.

ಹೀಗಾಗಿ, ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆಯಾಗಿಲ್ಲ. ಸದ್ಯ, ವಿದ್ಯಾರ್ಥಿಗಳು ಹಳೆಯ ಶೂ ಮತ್ತು ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ. BBMP ಶಾಲಾ ಮಕ್ಕಳು ಅಂದ್ರೆ ಸರ್ಕಾರಕ್ಕೆ ಅಷ್ಟೊಂದು ತಾತ್ಸಾರನಾ? ಸರ್ಕಾರ, ಬಿಬಿಎಂಪಿಯಿಂದ ಮಹಾ ಅನ್ಯಾಯವಾಗುತ್ತಿದ್ದು, ಶೂ, ಯೂನಿಫಾರಂ ಸಾಕ್ಸ್ ವಿತರಣೆಗೆ ಪಾಲಿಕೆಯಲ್ಲಿ ದುಡ್ಡು ಇಲ್ವಾ? ಎಂಬ ಚರ್ಚೆಗಳು ಶುರುವಾಗಿದೆ.

ಬಿಬಿಎಂಪಿಯ 93 ಶಿಶುವಿಹಾರ, 17 ಪ್ರಾಥಮಿಕ ಶಾಲೆ, 35 ಪ್ರೌಢಶಾಲೆ, 20 ಪಿಯು ಕಾಲೇಜು, 6 ಸ್ನಾತಕೋತ್ತರ ಪದವಿ ಕಾಲೇಜುಗಳಿವೆ. ಬಿಬಿಎಂಪಿ ಶಾಲೆಗಳಿಗೆ ಪ್ರಸಕ್ತ ವರ್ಷ 22 ಸಾವಿರಕ್ಕೂ ಅಧಿಕ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಈಗಾಗಲೇ ಶಾಲೆಗಳು ಆರಂಭಗೊಂಡು 35 ದಿನ ಕಳೆದಿವೆ. ಆದರೂ ಕೂಡ ಬಿಬಿಎಂಪಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆಯಾಗಿಲ್ಲ. ಪ್ರತಿಬಾರಿ ಸಮವಸ್ತ್ರ, ಶೂ ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದ ಪಾಲಿಕೆ ಈ ಬಾರಿಯೂ ಕೂಡ ತನ್ನ ಹಳೇ ಚಾಳಿ ಮುಂದುವರಿಸಿದೆ. ವಿದ್ಯಾರ್ಥಿಗಳು ಹೊಸ ಶೂ, ಸಮವಸ್ತ್ರ ಧರಿಸಲು ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.

ಈಗಾಗಲೇ ಬಿಬಿಎಂಪಿಯ ಶಾಲೆಗಳಲ್ಲಿ 22 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದು, ಬಿಬಿಎಂಪಿ ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಶೂ, ಸಮವಸ್ತ್ರ ವಿತರಿಸುತ್ತಾ ಕಾದುನೋಡಬೇಕಿದೆ.

ಇದನ್ನೂ ಓದಿ : ಭೀಕರ ಪ್ರವಾಹಕ್ಕೆ ನಲುಗಿದ ಟೆಕ್ಸಾಸ್ – ಮೃತರ ಸಂಖ್ಯೆ 80ಕ್ಕೆ ಏರಿಕೆ.. 41 ಮಂದಿ ಇನ್ನೂ ನಾಪತ್ತೆ!

Btv Kannada
Author: Btv Kannada

Read More