ರೇಣುಕಾಸ್ವಾಮಿ​​ ರೀತಿ ಮತ್ತೊಂದು ಭೀಕರ ಕೊಲೆ – ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ಬರ್ಬರ ಹತ್ಯೆ!

ಕಲಬುರಗಿ : ನಟ ದರ್ಶನ್ ಮತ್ತು ಗ್ಯಾಂಗ್ ಮಾದರಿಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲಿ ಮತ್ತೊಂದು ಭೀಕರ ಕೊಲೆ ಕಲಬುರಗಿಯಲ್ಲಿ ನಡೆದಿದೆ. ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ 39 ವರ್ಷದ ರಾಘವೇಂದ್ರ ನಾಯಕ್ ಎಂಬುವವರನ್ನು ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಲಬುರಗಿ ನಗರದ ರಾಘವೇಂದ್ರ ನಾಯಕ್ ಅವರನ್ನು ಮಾರ್ಚ್ 12 ರಂದು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಶ್ವಿನಿ ಅಲಿಯಾಸ್ ತನು ಎಂಬ ಮಹಿಳೆಗೆ ರಾಘವೇಂದ್ರ ಕಿರುಕುಳ ನೀಡುತ್ತಿದ್ದ. ಕಿರುಕುಳ ವಿಚಾರ ಗುರುರಾಜ್, ಲಕ್ಷ್ಮಿಕಾಂತ್​​ಗೆ ಅಶ್ವಿನಿ ವಿಚಾರ ತಿಳಿಸಿದ್ರು. ಅಶ್ವಿನಿ ಹೇಳಿದ ನಂತರ ಈ ಗ್ಯಾಂಗ್ ರಾಘವೇಂದ್ರ ಅವರನ್ನು ಕಿಡ್ನ್ಯಾಪ್ ಮಾಡಿ ಕೀರ್ತಿ ನಗರದ ಸ್ಮಶಾನಕ್ಕೆ ಕರೆದೊಯ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಅವರ ಖಾಸಗಿ ಅಂಗಕ್ಕೂ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಕೊಲೆ ಮಾಡಿದ ನಂತರ, ಹಂತಕರು ರಾಯಚೂರು ಬಳಿಯ ನದಿಗೆ ಶವವನ್ನು ಬಿಸಾಕಿ ಪರಾರಿಯಾಗಿದ್ದಾರೆ. ಕಲಬುರಗಿಯ ಸ್ಟೇಷನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಸ್ತುತ, ಸ್ಟೇಷನ್ ಬಜಾರ್ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಫೋಟೋಗೆ ಪೋಸ್​​ ಕೋಡೋದಕ್ಕೆ ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ.. ಮುಂದುವರೆದ ಶೋಧ ಕಾರ್ಯ!

Btv Kannada
Author: Btv Kannada

Read More