ಮಂಡ್ಯ : ಸಕ್ಕರೆನಾಡು ಮಂಡ್ಯದ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಹೊಸಗಾವಿ ಬಳಿ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬೈಕ್ ಬಿದ್ದು ಇಬ್ಬರು ಜೀವ ಕಳೆದುಕೊಂಡಿದ್ದು, ತುಮಕೂರು ಮೂಲದ ರಾಮಣ್ಣ ( 70), ಮದ್ದೂರಿನ ಸೋಮಹಳ್ಳಿ ಗ್ರಾಮದ ಭರತ್ (19) ಮೃತ ಬೈಕ್ ಸವಾರರು ಎಂದು ಗುರುತಿಸಲಾಗಿದೆ.
ಇವರಿಬ್ಬರು ಬೈಕ್ನಲ್ಲಿ ಸೋಮನಹಳ್ಳಿಯಿಂದ ಶಿವಪುರಕ್ಕೆ ಹೋಗುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರಣ ಸವಾರರು ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಸಿ ನಾಲೆಯ ತಡೆಗೆ ಡಿಕ್ಕಿ ಹೊಡೆದು ಸವಾರರು ಬಿದ್ದಿದ್ದಾರೆ. ನಾಲೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನೀರನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಬೈಕ್ನಿಂದ ಕಾಲುವೆ ಬಿದ್ದಿದ್ದರಿಂದ ದೇಹಕ್ಕೆ ಬಲವಾದ ಪೆಟ್ಟುಗಳು ತಗುಲಿ ಜೀವ ಕಳೆದುಕೊಂಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಸಿಲಿಕಾನ ಸಿಟಿ ಬೆಂಗಳೂರಿಗೆ ಹೈಪರ್‌ಲೂಪ್, ಪಾಡ್ ಟ್ಯಾಕ್ಸಿ ಶೀಘ್ರ – ನಿತಿನ್ ಗಡ್ಕರಿ!
