ತುಮಕೂರು : ಚಾಕುವಿನಿಂದ ಚುಚ್ಚಿ ಪತ್ನಿಯನ್ನೇ ಭೀಕರವಾಗಿ ಕೊಲೆಗೈದ ಪತಿ!

ತುಮಕೂರು : ಚಾಕುವಿನಿಂದ ಚುಚ್ಚಿ ಹೆಂಡ್ತಿಯನ್ನೇ ಭೀಕರವಾಗಿ ಗಂಡ ಕೊಲೆ ಮಾಡಿರುವ ಘಟನೆ ತುಮಕೂರು ಹೊರವಲಯ ಅಂತರಸನಹಳ್ಳಿಯಲ್ಲಿ ನಡೆದಿದೆ. 22 ವರ್ಷದ ಗೀತಾ ಕೊಲೆಯಾದ ದುರ್ದೈವಿ.

ಕೊರಟಗೆರೆ ತಾಲ್ಲೂಕಿನ ಅಮೃತಗಿರಿ ಗ್ರಾಮದ ನವೀನ್ ಮತ್ತು ಮಂಡ್ಯ ಜಿಲ್ಲೆ ಗಣನೂರು ಗ್ರಾಮದ ಮೃತ ಮಹಿಳೆ ಗೀತಾಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. 3 ವರ್ಷದ ಹಿಂದೆ ಇಬ್ಬರು ಪ್ರೀತಿ ಮದುವೆಯಾಗಿದ್ದರು. ಗೀತಾ-ನವೀನ್ ನಡುವೆ ಪದೇ‌ ಪದೇ ಗಲಾಟೆ ನಡೆಯುತ್ತಿತ್ತು. ಗಲಾಟೆ ವೇಳೆ ಪತ್ನಿ ಗೀತಾಳನ್ನು ಚಾಕುವಿನಿಂದ ಚುಚ್ಚಿ ನವೀನ್ ಕೊಲೆಗೈದಿದ್ದಾನೆ.

ಘಟನಾ ಸ್ಥಳಕ್ಕೆ ASP ಗೋಪಾಲ್, ಡಿವೈಎಸ್​ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಪತಿ ನವೀನ್​​ಗಾಗಿ ಪೊಲೀಸರಿಂದ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಸೋಶಿಯಲ್ ಮೀಡಿಯಾ ಆ್ಯಡ್ ನಂಬಿದ್ರೆ ಪಂಗನಾಮ – ಸೈಟ್ ಹೆಸರಿನಲ್ಲಿ ದಂಪತಿಗೆ ಲಕ್ಷ ಲಕ್ಷ ದೋಖಾ!

Btv Kannada
Author: Btv Kannada

Read More