ಸೋಶಿಯಲ್ ಮೀಡಿಯಾ ಆ್ಯಡ್ ನಂಬಿದ್ರೆ ಪಂಗನಾಮ – ಸೈಟ್ ಹೆಸರಿನಲ್ಲಿ ದಂಪತಿಗೆ ಲಕ್ಷ ಲಕ್ಷ ದೋಖಾ!

ಬೆಂಗಳೂರು : ಬೆಂಗಳೂರಲ್ಲಿ ಸೈಟ್, ಮನೆಗಳನ್ನು ತಗೊಳೋ ಮುನ್ನ ಹುಷಾರಾಗಿರಿ. ಸದ್ಯಕ್ಕೆ ಇನ್ನೂ 1 ವರ್ಷಗಳ ಕಾಲ ಯಾರು ಸೈಟ್​ ಕೊಂಡುಕೊಳ್ಳಬೇಡಿ. ಯಾಕೆಂದರೆ ಈಗಾಗಲೇ ಸೈಟ್ ಖರೀದಿ ವಿಚಾರದಲ್ಲಿ ನೂರಾರು ವಂಚನೆಗಳು ನಡೆದಿವೆ. ಇದೀಗ ಜನರನ್ನು ದೋಚಲು ಇನ್ನೊಂದು ವಂಚಕರ ಟೀಂ ಸಜ್ಜಾಗಿದೆ.

ಉಮಾನಂದ & ಟೀಂ ಬೆಂಗಳೂರಿನ ಚೇತನಾ ಮತ್ತು ಪ್ರಕಾಶ್ ದಂಪತಿಗೆ ಸೈಟ್ ಹೆಸರಲ್ಲಿ 2.5 ಲಕ್ಷ ರೂ. ವಂಚನೆ ಮಾಡಿದೆ. ನಾಗರಬಾವಿ ಬಳಿ ತನ್ನದೇ ಆಫೀಸ್ ಮಾಡ್ಕೊಂಡಿದ್ದ​ ಉಮಾನಂದ SRS ಪ್ರಮೋಟರ್ಸ್ ಹೆಸರಲ್ಲಿ ಯೂಟ್ಯೂಬ್ ಚಾನಲ್​ನಲ್ಲಿ ಆಫರ್ ಬಗ್ಗೆ ಹೇಳಿದ್ದ. ಯೂಟ್ಯೂಬ್ ಚಾನಲ್​ನಲ್ಲಿ ಜಾಗ ಕೊಡ್ಸೋದಾಗಿ ಉಮಾನಂದ ದೊಡ್ಡದಾಗಿ  ಹೇಳಿಕೆ ಕೊಟ್ಟಿದ್ದ, ಯೂಟ್ಯೂಬ್ ಚಾನಲ್​ ಆಫರ್​ ನೋಡಿ ದಂಪತಿ ಸೈಟ್ ಖರೀದಿಗೆ ಬಂದಿದ್ದರು.

ಚೇತನಾ & ಪ್ರಕಾಶ್ ದಂಪತಿ ವಂಚಕ ಉಮಾನಂದನ ಭೇಟಿ ಮಾಡಿದ್ದು, ಈ ವೇಳೆ ನೆಲಮಂಗಲದ ಶ್ರೀ ರಿದ್ದಿ-ಸಿದ್ದಿ ಲೇಔಟ್​ನಲ್ಲಿ ನಿವೇಶನ ಕೊಡಿಸೋ ಆಫರ್ ಕೊಟ್ಟಿದ್ದರು. ಶ್ರೀ ರಿದ್ದಿ-ಸಿದ್ದಿ ಲೇಔಟ್​ನಲ್ಲಿ 600 ಅಡಿ ಜಾಗ ಕೊಡಿಸ್ತೇನೆ ಎಂದು ಉಮಾನಂದ ತನ್ನದೇ ಕಾರಿನಲ್ಲಿ ಸೈಟ್ ಬಳಿ ಕರ್ಕೊಂಡ್ ಹೋಗಿ ನಂಬಿಸಿದ್ದ. ಸೈಟ್ ಆಸೆಗೆ ಚೇತನಾ & ಪ್ರಕಾಶ್ 50 ಸಾವಿರ ಡೌನ್ ಪೇಮೆಂಟ್ ಮಾಡಿದರು. ಬಳಿಕ ದಂಪತಿ ಉಮಾನಂದಗೆ 2 ಲಕ್ಷ ರೂಪಾಯಿಯ ಚೆಕ್​​​ ನೀಡಿದ್ದರು. ಹಲವು ದಿನಗಳು ಕಳೆದ್ರೂ ದಂಪತಿಗೆ ಸೈಟ್ ರಿಜಿಸ್ಟ್ರೇಷನ್ ಆಗ್ಲೇ ಇಲ್ಲ. ಇತ್ತ ಉಮಾನಂದ ಹೇಳ್ದೇ ಕೇಳ್ದೇ ಆಫೀಸ್ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದ.

ಸೈಟ್ ಆಸೆಗೆ ಲಕ್ಷ ಲಕ್ಷ ಕಳಕೊಂಡು ಚೇತನಾ ದಂಪತಿ ದಿಕ್ಕೇ ದೋಚದಂತಾಗಿದ್ದು, ಕೊನೆಗೆ ಮಾದನಾಯಕನಹಳ್ಳಿ ಠಾಣೆಗೆ ವಂಚನೆಗೊಳಗಾದ ಚೇತನಾ ದೂರು ನೀಡಿದ್ದಾರೆ.
ದೂರು ದಾಖಲಾಗಿ ತಿಂಗಳಾದ್ರೂ ಆರೋಪಿ ಉಮಾನಂದ, ಗೌರಿ ಪತ್ತೆಯಾಗಿಲ್ಲ. ದಂಪತಿ ಪೊಲೀಸ್ ಠಾಣೆಗೆ ಅಲೆದೂ ಸಾಕಾಗಿ ನ್ಯಾಯಕ್ಕೆ ಆಗ್ರಹಿಸುತ್ತಿದ್ದಾರೆ. ಹಾಗಾಗಿ ಮಾರ್ಕೆಟಿಂಗ್​ ಆ್ಯಡ್ ನೋಡಿ ಸೈಟ್ ಖರೀದಿ ಮಾಡೋ ಮುನ್ನ ಹುಷಾರಾಗಿರಿ.

ಇದನ್ನೂ ಓದಿ : ಕುಂಬಳಗೂಡು ಪ್ರಾವಿಡೆಂಟ್ ಅಪಾರ್ಟ್​ಮೆಂಟ್​ನಲ್ಲಿ ಭಾರೀ ಅಗ್ನಿ ಅವಘಡ!

Btv Kannada
Author: Btv Kannada

Read More