ಬೆಂಗಳೂರು : ನಗರದ ಪ್ರಾವಿಡೆಂಟ್ ಇಕ್ವಿನಾಕ್ಸ್ ಅಪಾರ್ಟ್ಮೆಂಟ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 12 ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಪಾರ್ಟ್ಮೆಂಟ್ನಲ್ಲಿ ಸುಮಾರು 1200-1300 ಕುಟುಂಬಗಳು ವಾಸವಿದೆ.
3ನೇ ಮಹಡಿಯಿಂದ 12ನೇ ಮಹಡಿವರೆಗೂ ಬೆಂಕಿ ಹೊತ್ತಿ ಉರಿದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಪಾರ್ಟ್ಮೆಂಟ್ಬಳಿ ಕಿರಿದಾದ ದಾರಿ ಇರೋದರಿಂದ ಅಗ್ನಿಶಾಮಕ ವಾಹನ ಒಳ ಹೋಗಲು ಜಾಗವಿಲ್ಲದೆ ಪರದಾಡಿದೆ. ಇಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಂಡರೂ ಅಪಾರ್ಟ್ಮೆಂಟ್ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದೆ.
ಇದೀಗ ಅಪಾರ್ಟ್ಮೆಂಟ್ ಆಡಳಿತ ಮಂಡಳಿ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಅಪಾರ್ಟ್ಮೆಂಟ್ನ ಸೇಲ್ಸ್ ಡಿಪಾರ್ಟ್ಮೆಂಗೆ ನುಗ್ಗಿ ಗಲಾಟೆ ಮಾಡಿ, ಅದಷ್ಟು ಬೇಗ fire extinguisher ಹಾಕಿಸುವಂತೆ ಒತ್ತಾಯ ಹೇರಿದ್ದಾರೆ. ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕಿಚ್ಚ ಫ್ಯಾನ್ಸ್ಗೆ ಗುಡ್ ನ್ಯೂಸ್ – ಸುದೀಪ್ 47ನೇ ಸಿನಿಮಾ ಅನೌನ್ಸ್!
