ಚಿಕ್ಕಮಗಳೂರು : ರಾಜ್ಯದಲ್ಲಿ ಸಂಭವಿಸ್ತಿರುವ ಹೃದಯಾಘಾತ ದುರಂತ ಪ್ರಕರಣಗಳು ಮುಂದುವರಿದಿವೆ. ಹಾಸನ ಬಳಿಕ ರಾಜ್ಯಾದ್ಯಂತ ಹೃದಯಾಘಾತ ಕೇಸ್ಗಳು ಹಬ್ಬಿದ್ದು, ಚಿಕ್ಕಮಗಳೂರಿನಲ್ಲಿ ಒಂದೇ ದಿನ ಹಾರ್ಟ್ ಅಟ್ಯಾಕ್ಗೆ ಇಬ್ಬರು ಬಲಿಯಾಗಿದ್ದಾರೆ.
27 ವರ್ಷದ ಮೀನಾಕ್ಷಿ, 75 ವರ್ಷದ ಸುಮಿತ್ರೇಗೌಡ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದವರು. ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಮೀನಾಕ್ಷಿ
ಎದೆ ಉರಿ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಯುವತಿ ಮೀನಾಕ್ಷಿ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿದ್ದಾರೆ.
ಬಿ.ಹೊಸಳ್ಳಿ ಗ್ರಾಮದ ಸುಮಿತ್ರೇಗೌಡ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದಿನೇ ದಿನೇ ಹಾರ್ಟ್ ಅಟ್ಯಾಕ್ ಸರಣಿ ಸಾವುಗಳು ಹೆಚ್ಚಾಗ್ತಿದ್ದು, ಯುವಜನತೆ, ವೃದ್ಧರು ಸೇರಿ ಯಾರನ್ನೂ ಬಿಡದೇ ಹೃದಯಾಘಾತ ಸಂಭವಿಸುತ್ತಿವೆ.
ಇದನ್ನೂ ಓದಿ : “ಜಸ್ಟ್ ಮ್ಯಾರೀಡ್” ಚಿತ್ರದ ಪ್ರಮುಖ ಪಾತ್ರದಲ್ಲಿ ವಾಣಿ ಹರಿಕೃಷ್ಣ ಮತ್ತು ರವಿಶಂಕರ್ ಗೌಡ!

Author: Btv Kannada
Post Views: 1,467