“ಜಸ್ಟ್ ಮ್ಯಾರೀಡ್” ಚಿತ್ರದ ಪ್ರಮುಖ ಪಾತ್ರದಲ್ಲಿ ವಾಣಿ ಹರಿಕೃಷ್ಣ ಮತ್ತು ರವಿಶಂಕರ್ ಗೌಡ!

ಸಿ.ಆರ್.ಬಾಬಿ ಅವರ ನಿರ್ದೇಶನದಲ್ಲಿ ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ “ಜಸ್ಟ್ ಮ್ಯಾರೀಡ್”. ಈ ಚಿತ್ರವನ್ನು ಇಡೀ ವಿಶ್ವವೇ ಮೆಚ್ಚಿಕೊಂಡ “ಕಾಂತಾರ”ದಂತಹ ಸೂಪರ್ ಹಿಟ್ ಚಿತ್ರಗಳ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಿ.ಆರ್.ಬಾಬಿ ಜೊತೆಗೂಡಿ ನಿರ್ಮಿಸಿದ್ದಾರೆ.

ಈಗಾಗಲೇ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿರುವ “ಜಸ್ಟ್ ಮ್ಯಾರೀಡ್” ಚಿತ್ರವನ್ನು ಸಿ.ಆರ್ ಬಾಬಿ ಅವರೆ ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದಲ್ಲಿ ನಟಿಸಿರುವ ಪ್ರಮುಖ ಕಲಾವಿದರನ್ನು ಚಿತ್ರತಂಡ ಈಗ ಪರಿಚಯಿಸುತ್ತಿದೆ.

ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ವಾಣಿ ಹರಿಕೃಷ್ಣ ಇದೇ ಮೊದಲ ಬಾರಿಗೆ ಚಲನಚಿತ್ರದಲ್ಲಿ ನಟಿಸಿದ್ದು, ಮಂಗಳ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ರವಿಶಂಕರ್ ಗೌಡ “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ವಿನಯ ಪ್ರಕಾಶ ಎಂಬ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಡೆತ್​​ ನೋಟ್ ಬರೆದಿಟ್ಟು ಲಾಡ್ಜ್​​ನಲ್ಲಿ ಸಬ್​ ಇನ್ಸ್​ಪೆಕ್ಟರ್ ಆತ್ಮಹತ್ಯೆ!

Btv Kannada
Author: Btv Kannada

Read More