ಬೆಂಗಳೂರು : ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ. ರಭಸವಾಗಿ ಬಂದ ಟೆಂಪೋ ರಸ್ತೆ ಬದಿಗೆ ಡಿಕ್ಕಿ ಹೊಡೆದಿದ್ದು, ಟೆಂಪೋ ಎರಡು ಪೀಸ್ ಆಗಿದೆ.
ಈ ಘಟನೆ ಜುಲೈ 5 ರಂದು ಮಧ್ಯಾಹ್ನ 1 ಗಂಟೆಗೆ ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿಯಲ್ಲಿ ನಡೆದಿದೆ. ಟೆಂಪೊ ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ತೆರಳುತ್ತಿತ್ತು. ರಿಂಗ್ ರಸ್ತೆಯಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಟೆಂಪೋದಲ್ಲಿ ಬೆಡ್ ಶೀಟ್ ಮತ್ತು ಬಟ್ಟೆಗಳು ತುಂಬಿದ್ದವು. ಸ್ಪೀಡ್ ಆಗಿ ಬಂದ ಟೆಂಪೊ ಬಲಭಾಗದ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಡಿವೈಡರ್ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಟೆಂಪೋ ಕ್ಯಾಬಿನ್ ತುಂಡಾಗಿ ಕೆಳಗೆ ಬಿದ್ದಿದೆ.
ಡ್ರೈವರ್ ಸೀಟ್ ನಿಂದ ನೇತಾಡಿ ಕೆಳಗೆ ಬಿದ್ದ ಚಾಲಕ 35 ವರ್ಷದ ರಾಘವೇಂದ್ರಗೆ ತೀವ್ರ ಗಾಯವಾಗಿದೆ. ಟೆಂಪೊದಲ್ಲಿದ್ದ ಸಲೀಂ ಮತ್ತು ಫಜಾಯ್ಗೂ ಗಾಯವಾಗಿದೆ. ಬ್ರಿಡ್ಜ್ ನಿಂದ ಕೆಳಗೆ ಬಿದ್ದ ಕ್ಯಾಬಿನ್ ನಲ್ಲಿದ್ದ ಮೂವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಅಪಘಾತ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ನೈಸ್ ಯೋಜನೆಗಾಗಿ KIADB ವಶಪಡಿಸಿಕೊಂಡ 300 ಎಕರೆ ಭೂಸ್ವಾಧೀನ ರದ್ದು!
