ಬೆಂಗಳೂರು : ರಾಜ್ಯದ ಕರಾವಳಿ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 12ರವರೆಗೂ ಮಳೆ ಮುಂದುವರೆಯಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗಲಿದೆ. ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪ. ಕಲಬುರಗಿ,ಹಾವೇರಿ, ಗದಗ, ಧಾರವಾಡ, ಬೀದರ್ನಲ್ಲಿ ಕೂಡ ಮಳೆಯಾಗಲಿದೆ.
ಕ್ಯಾಸಲ್ರಾಕ್, ಭಾಗಮಂಡಲ, ಕುಂದಾಪುರ, ಸಿದ್ದಾಪುರ, ಕೋಟಾ, ಗೇರುಸೊಪ್ಪ, ಕೊಟ್ಟಿಗೆಹಾರ, ಕಮ್ಮರಡಿ, ಮೂಡುಬಿದಿರೆ, ಮುಲ್ಕಿ, ಲೋಂಡಾದಲ್ಲಿ ಭಾರಿ ಮಳೆಯಾಗಿದೆ. ಕಾರ್ಕಳ, ಕದ್ರಾ, ಶಿರಾಲಿ, ಉಡುಪಿ, ಮಂಗಳೂರು, ಯಲ್ಲಾಪುರ, ಧರ್ಮಸ್ಥಳ, ಬಂಟವಾಳ, ಕಳಸ, ಹುಂಚದಕಟ್ಟೆ, ಪಣಂಬೂರು, ಕೊಪ್ಪ, ನಾಪೋಕ್ಲು, ಕುಮಟಾ, ಬೆಳ್ತಂಗಡಿ, ಪುತ್ತೂರು, ಗೋಕರ್ಣ, ಕೆಂಭಾವಿ, ವಿರಾಜಪೇಟೆ, ಕಿರವತ್ತಿ, ಬಾಳೆಹೊನ್ನೂರು, ಕಿತ್ತೂರು, ಹಳಿಯಾಳ, ಇಳಕಲ್, ಮುಂಡಗೋಡು, ಬೆಳಗಾವಿ, ಗುರುಮಿಟ್ಕಲ್, ಕುರ್ಡಿ, ಧಾರವಾಡ, ಬೈಲಹೊಂಗಲ, ಮಧುಗಿರಿ, ಹಾರಂಗಿ, ಬೇಲೂರು, ಜಗಳೂರು, ಕೋಣನೂರು, ಶಿವಮೊಗ್ಗದಲ್ಲಿ ಮಳೆಯಾಗಿದೆ.
ಹೊನ್ನಾವರದಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇದನ್ನೂ ಓದಿ : ಎನ್ಸಿ ಕ್ಲಾಸಿಕ್ ಟೂರ್ನಿ ಗೆದ್ದ ನೀರಜ್ ಚೋಪ್ರಾ – ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ!
