ನಟ ಕಿರಣ್ ರಾಜ್ ಬರ್ತ್​ಡೇಗೆ ಮತ್ತೊಂದು ಗುಡ್ ನ್ಯೂಸ್ – ಗುರುತೇಜ್ ಶೆಟ್ಟಿ ನಿರ್ದೇಶನದ “ಜಾಕಿ 42” ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ!

ಸ್ಯಾಂಡಲ್​ವುಡ್​ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಉದಯೋನ್ಮುಖ ನಟ ಕಿರಣ್ ರಾಜ್ ಕಾಂಬಿನೇಷನ್​ನ “ಜಾಕಿ 42″ ಸಿನಿಮಾ ಈಗ ಸುದ್ದಿಯಲ್ಲಿದೆ. ಗೋಲ್ಡನ್ ಗೇಟ್ ಸ್ಟುಡಿಯೋಸ್‌ನ ಬ್ಯಾನರ್‌ ಅಡಿಯಲ್ಲಿ ಭಾರತಿ ಸತ್ಯನಾರಾಯಣ್ ‘ಜಾಕಿ 42” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಾರತಿ ಸತ್ಯ ನಾರಾಯಣ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಜಾಕಿ 42. 

ನಿರ್ದೇಶಕ ಗುರುತೇಜ್ ಶೆಟ್ಟಿ ಹಾರ್ಸ್ ರೇಸಿಂಗ್ ಕಥಾ ವಸ್ತುವನ್ನೇ ಮೂಲವಾಗಿಟ್ಟು ಸಿನಿಮಾ ಮಾಡುತ್ತಿದ್ದು, ಈಗಾಗಲೇ ಬೆಂಗಳೂರು ಸುತ್ತ ಮುತ್ತಲೂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಜಾಕಿ 42 ಚಿತ್ರಕ್ಕಾಗಿಯೇ ನಾಯಕ ನಟ ಕಿರಣ್ ರಾಜ್ ಥೈಲ್ಯಾಂಡ್ ಗೆ ಹಾರ್ಸ್ ರೈಡಿಂಗ್ ಜಾಕಿ ಟ್ರೈನಿಂಗ್ ತೆಗೆದುಕೊಂಡು ಬಂದಿರುವುದು ವಿಶೇಷವಾಗಿದೆ. ಈ ಚಿತ್ರದಲ್ಲಿ ದೊಡ್ಡ ಮಟ್ಟದ ಕಲಾವಿದರ ದಂಡು ಇರಲಿದೆ.

ರಾಘವೇಂದ್ರ ಬಿ. ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್.ಬಿ. ಸಂಕಲನ ಚಿತ್ರಕ್ಕಿದೆ. ಚಿತ್ರ ಕಥೆಯಲ್ಲಿ ಲವ್, ಫ್ಯಾಮಿಲಿ, ಸೆಂಟಿಮೆಂಟ್, ಹಾಸ್ಯ ಎಲ್ಲವೂ ಒಳಗೊಂಡಿದೆ.

ಇದನ್ನೂ ಓದಿ : ಸಪ್ತಸಾಗರದಾಚೆಗೂ ರಾಕಿಂಗ್ ಸ್ಟಾರ್ ಯಶ್ ಹವಾ.. ನ್ಯೂಯಾರ್ಕ್​ನ ಟೈಮ್ಸ್ ಸ್ಕ್ವೇರ್‌ನಲ್ಲಿ “ರಾಮಾಯಣ” ಟೈಟಲ್ ಟೀಸರ್​ ರಿಲೀಸ್!

Btv Kannada
Author: Btv Kannada

Read More