WPL : ಗುಜರಾತ್ ವಿರುದ್ಧ ರಿಚಾ ಘೋಷ್ ಘರ್ಜನೆ.. ಮೊದಲ ಪಂದ್ಯದಲ್ಲೇ ಆರ್​​ಸಿಬಿಗೆ ರೋಚಕ ಗೆಲುವು..!

ಮಹಿಳಾ ಪ್ರೀಮಿಯರ್ ಲೀಗ್ (WPL) 2025ರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘ ಜಯ ಸಾಧಿಸಿದೆ.

ವಡೋದರಾದ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಿನ್ನೆ ನಡೆದ ಮೊದಲ ಪಂದ್ಯದಲ್ಲೇ RCBಗೆ ಗುಜರಾತ್​​​ ಜೈಂಟ್ಸ್ 201 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಆರ್​​ಸಿಬಿ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಸ್ಟಾರ್​​ ಪ್ಲೇಯರ್​ ರಿಚಾ ಘೋಷ್ ಸ್ಫೋಟಕ ಅರ್ಧಶತಕದಿಂದ ಗೆಲುವು ಸಾಧಿಸಿದೆ.

RCB ಪರ ಆರಂಭಿಕ ಆಟಗಾರರಾದ ಸ್ಮೃತಿ ಮಂಧಾನ (9) ಡೇನಿಯಲ್ ವ್ಯಾಟ್ (4) ರನ್ ಗಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಎಲಿಸ್ ಪೆರಿ ಮತ್ತು ರಾಘವಿ 86 ರನ್ ಗಳ ಜೊತೆಯಾಟ ಆಡಿದ್ದು ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಬಳಿಕ ಕ್ರಿಸ್ ಗೆ ಕಾಲಿಟ್ಟ ರಿಚಾ ಘೋಷ್ 27 ಎಸೆತಗಳಲ್ಲಿ 64 ರನ್ ಬಾರಿಸಿದ್ದು, ತಂಡಕ್ಕೆ ಗೆಲುವು ತಂದುಕೊಟ್ಟರು.

Btv Kannada
Author: Btv Kannada

Read More