ಮದುವೆಯಾಗದೆ ತಾಯಿಯಾಗ್ತಿದ್ದಾರೆ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಗುಡ್​ನ್ಯೂಸ್ ಕೊಟ್ಟ ಸ್ಯಾಂಡಲ್​ವುಡ್​​ ನಟಿ!

ಬೆಂಗಳೂರು : ಸ್ಯಾಂಡಲ್​ವುಡ್​ನ ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಭಾವನಾ ರಾಮಣ್ಣ ಅವರು ತಮ್ಮ 40ನೇ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಐವಿಎಫ್‌ (In Vitro Fertilization) ಮೂಲಕ ಭಾವನಾ ಅವರು ಈಗ 6 ತಿಂಗಳ ಗರ್ಭಿಣಿಯಾಗಿದ್ದಾರೆ.

ಭಾವನಾ ಅವರು ಸದ್ಯ ತಾಯಿಯಾಗುವ ಖುಷಿಯಲ್ಲಿದ್ದು, ಅವರು ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಒಂದು ಮಗುವಿಗೆ ಅಲ್ಲ, ಐವಿಎಫ್‌ ಮೂಲಕ ಅವಳಿ ಮಕ್ಕಳಿಗೆ ಭಾವನಾ ಅವರು ತಾಯಿಯಾಗುತ್ತಿರುವುದು ಡಬಲ್​ ಖುಷಿ ಆಗಿದೆ ಅಂತೆ ಅವರಿಗೆ. ಭಾವನಾ ಅವರ ಲವ್​, ಮದುವೆ ಕುರಿತು ಕೆಲವೊಂದು ವದಂತಿಗಳು ಬರುತ್ತಿದ್ದವು. ಆದರೆ ಇವುಗಳಿಗೆ ಉತ್ತರ ಇಲ್ಲದೇ ಮತ್ತೆ ಸೈಲೆಂಟ್ ಆಗುತ್ತಿದ್ದವು. ಆದರೆ ಈಗ ಎಲ್ಲದಕ್ಕೂ ಭಾವನಾ ಅವರು ಬ್ರೇಕ್ ಹಾಕಿದ್ದು ಒಂಟಿಯಾಗಿಯೇ ತಾಯಿಯಾಗುತ್ತಿದ್ದಾರೆ.

ತುಂಬು ಕುಟುಂಬದಲ್ಲಿ ಬೆಳೆದ ನನಗೆ ಈವರೆಗೂ ತಾಯಿ ಆಗುವ ಬಯಕೆ ಇರಲಿಲ್ಲ. ಆದರೆ ಈಗೀಗ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು. ಹೀಗಾಗಿ ಐವಿಎಫ್​ ಮೂಲಕ ಈಗ ಗರ್ಭಿಣಿಯಾಗಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ. ಅಮ್ಮ ಆಗುವ ಉತ್ಸುಕದಲ್ಲಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ರೆಟ್ರೋ ಲುಕ್‌ನಲ್ಲಿ ಡಾಲಿ ಧನಂಜಯ್.. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಫಸ್ಟ್‌ ಲುಕ್ ಔಟ್​!

Btv Kannada
Author: Btv Kannada

Read More