ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ – ಡಿಸಿಎಂ ಡಿಕೆಶಿ ಮಾರ್ಮಿಕ ನುಡಿ!

ಮೈಸೂರು : ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ. ನಾನು ನನಗೆ ಏನು ಬೇಕು ಅದನ್ನೇ ಪ್ರಾರ್ಥನೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.

ಆಷಾಢ ಹಿನ್ನೆಲೆಯಲ್ಲಿ ಇವತ್ತು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ನೀವು ಸಿಎಂ ರೇಸ್​ನಿಂದ ಹೊರಬಿದ್ರಾ ಎಂದು ಮಾಧ್ಯಮಗಳು ಕೇಳಿದ್ದವು. ಅದಕ್ಕೆ ಶಿವಕುಮಾರ್​ ಈ ರೀತಿಯ ಉತ್ತರ ನೀಡಿದ್ದಾರೆ.

ಮುಂದುವರಿದು ಮಾತನಾಡಿರುವ ಶಿವಕುಮಾರ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಮಗೆ ಬುದ್ಧಿವಾದ ಹೇಳಿದ್ದಾರೆ. ಹೈಕಮಾಂಡ್ ಕೂಡ ಕೆಲವು ವಿಚಾರಗಳನ್ನು ಹೇಳಿದೆ. ಇಲ್ಲಿ ರಾಜಕೀಯ ಚರ್ಚೆ ಬೇಡ. ನಾನು ಚಾಮುಂಡಿ ಬೆಟ್ಟಕ್ಕೆ ಬಂದಿದ್ದೇನೆ. ಕುಟುಂಬ ಸಮೇತ ಚಾಮುಂಡೇಶ್ವರಿಯ ದರ್ಶನ ಮಾಡಿದ್ದೇನೆ. ನಾಡಿನ ಜನರಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ಕೌಟುಂಬಿಕ ಕಥಾಹಂದರದ ಬಹುನಿರೀಕ್ಷಿತ ‘S\O ಮುತ್ತಣ್ಣ’ ಚಿತ್ರ ಆಗಸ್ಟ್ 22ಕ್ಕೆ ತೆರೆಗೆ!

Btv Kannada
Author: Btv Kannada

Read More