ಬೆಂಗಳೂರು : ಹೃದಯಾಘಾತ ಎನ್ನುವ ಪದ ಇತ್ತೀಚೆಗೆ ಪ್ರತಿಯೊಬ್ಬರ ಎದೆ ಬಡಿತವನ್ನು ಹೆಚ್ಚುವಂತೆ ಮಾಡುತ್ತಿದೆ. ವಯಸ್ಸಿನ ಮಿತಿಯೇ ಇಲ್ಲದೆ ಬಾಲಕರಿಂದ ವೃದ್ಧರವರೆಗೂ ಹೃದಯದ ಕಾಯಿಲೆ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ಕೂಡ ನಡೆಯುತ್ತಿವೆ.
ಇದರ ನಡುವೆ ಇದೀಗ ಹೃದಯಾಘಾತಕ್ಕೆ ರೈತ ಬಲಿಯಾಗಿರುವ ಘಟನೆ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ನಡೆದಿದೆ. ಗುಂಡ್ಲಪೇಟೆಯ ರೈತ ಈಶ್ವರ್ (50) ಮೃತ ರೈತ.
ಫ್ರೀಡಂ ಪಾರ್ಕ್ಗೆ ಪ್ರತಿಭಟನೆಗೆ ಆಗಮಿಸುವಾಗ ದುರ್ಘಟನೆ ಸಂಭವಿಸಿದೆ.
50 ವರ್ಷದ ರೈತ ಈಶ್ವರ್ ಗುಂಡ್ಲಪೇಟೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದರು. ರೈಲು ಇಳಿದು ಹೊರ ಬರುವಾಗ ಏಕಾಏಕಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಪೊಲೀಸರು ಸಿಪಿಆರ್ ಕೊಡಲು ಪ್ರಯತ್ನಿಸಿದ್ದಾರೆ. ಆ ಬಳಿಕ ಅಪೋಲೋ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ರೈತ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : CS ಶಾಲಿನಿ ರಜನೀಶ್ ವಿರುದ್ಧದ ಅವಹೇಳನಕಾರಿ ಹೇಳಿಕೆ – FIR ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ರವಿಕುಮಾರ್!

Author: Btv Kannada
Post Views: 740