CS ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ – MLC ರವಿಕುಮಾರ್​ಗೆ ನೋಟಿಸ್ ನೀಡಲು ಪೊಲೀಸರ ತಯಾರಿ!

ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ಈಗಾಗಲೇ FIR ದಾಖಲಾಗಿದೆ. ವಿಧಾನಸೌಧ ಪೊಲೀಸರಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೀಗ ರವಿಕುಮಾರ್​ಗೆ ನೋಟಿಸ್ ನೀಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.

MLC ಎನ್ ರವಿಕುಮಾರ್ ಅವರನ್ನು ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ಪೊಲೀಸರ ನಿರ್ಧಾರಿಸಿದ್ದಾರೆ. ಅಲ್ಲದೆ, ರವಿಕುಮಾರ್ ಮಾತನಾಡಿದ್ದಾರೆ ಎನ್ನಲಾದ ಒರಿಜಿನಲ್ ವಿಡಿಯೋ ಪೂಟೇಜ್​ನ್ನು ಸಹ ಸಂಗ್ರಹ ಮಾಡಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸರು‌ ರೆಕಾರ್ಡ್ ಮಾಡಿರುವ ವಿಡಿಯೋ, ಹಾಗೂ ಇತರ ವಿಡಿಯೋ ಪೂಟೇಜ್​ಗಳನ್ನು ಸಂಗ್ರಹ ಮಾಡಲಾಗಿದ್ದು, ವಿಡಿಯೋ ಪೂಟೇಜ್ ಪರಿಶೀಲನೆ ನಡೆಸಿ ಎಫ್ಎಸ್ಎಲ್​ಗೆ ರವಾನೆ ಮಾಡಲಾಗುತ್ತದೆ.

ವಿಡಿಯೋದಲ್ಲಿನ ಮಾತುಗಳು ರವಿಕುಮಾರ್ ಅವರದ್ದೇನಾ ಅಂತಾ ಪರಿಶೀಲಿಸಬೇಕಾಗಿರುವ ಹಿನ್ನಲೆ ಪೊಲೀಸರು ಎಫ್ಎಸ್ಎಲ್​ಗೆ ರವಾನೆ ಮಾಡಲಿದ್ದಾರೆ. ಇಂದೇ ವಿಡಿಯೋವನ್ನ FSLಗೆ ರವಾನಿಸುವ ಸಾಧ್ಯತೆಯಿದೆ.

ಅಲ್ಲದೆ, ಪೊಲೀಸರು ರವಿಕುಮಾರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದು, ಬಿಎನ್ಎಸ್ 351(3) – ಅನೈತಿಕತೆಯನ್ನ ಆರೋಪಿಸುವ ಕ್ರಿಮಿನಲ್ ಬೆದರಿಕೆ,  7 ವರ್ಷಗಳ ಶಿಕ್ಷೆ ಮತ್ತು ದಂಡ ಒಳಗೊಂಡಿರುವ ಸೆಕ್ಷನ್ ಇದಾಗಿದೆ. 351(3) ಸೆಕ್ಷನ್ ನಡಿ ಅರೆಸ್ಟ್ ಮಾಡಲು ಕೂಡ ಅವಕಾಶವಿದೆ. ಹೀಗಾಗಿ ರವಿಕುಮಾರ್ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಮಂಗಳೂರಲ್ಲಿ ಬಿಜೆಪಿ ಮುಖಂಡನ ಪುತ್ರನ ಲವ್, ಸೆಕ್ಸ್, ದೋಖಾ ಕರ್ಮಕಾಂಡ – ಯುವತಿಯನ್ನು ಗರ್ಭಿಣಿ ಮಾಡಿ ಯುವಕ ಎಸ್ಕೇಪ್​​!

Btv Kannada
Author: Btv Kannada

Read More