CS ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಬಿಜೆಪಿ MLC ರವಿಕುಮಾರ್​ ವಿರುದ್ಧ FIR!

ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ನಾಲಗೆ ಹರಿಬಿಟ್ಟ ಬಿಜೆಪಿ ಪರಿಷತ್‌ ಸದಸ್ಯ ರವಿಕುಮಾರ್‌ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  FIR ದಾಖಲಾಗಿದೆ.

‘ರಾತ್ರಿಯಿಡೀ ಸರ್ಕಾರಕ್ಕೆ, ಇಡೀ ದಿನ ಸಿಎಂಗಾಗಿ ಕೆಲಸ ಮಾಡ್ತಾರೆ’ ಎಂದು ರವಿಕುಮಾರ್ CS ಶಾಲಿನಿ ರಜನೀಶ್ ಬಗ್ಗೆ ಲಿಮಿಟ್ ಮೀರಿ ಮಾತನಾಡಿದ್ದರು. ಮಹಿಳಾ ಕುಲಕ್ಕೆ ಅಗೌರವ ತೋರಿರುವ ರವಿಕುಮಾರ್ ವಿರುದ್ಧ ದೂರು ದಾಖಲಾಗಿದೆ.

ಜೆಪಿನಗರದ ನಿವಾಸಿಯಾಗಿರುವ ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 351(3)(ಅನೈತಿಕತೆಯ ಆರೋಪ), 75(3) (ಅಶ್ಲೀಲ ಹೇಳಿಕೆ), 79(ಮಹಿಳೆಯ ಮಾನಕ್ಕೆ ಕುಂದು ತರುವ ಉದ್ದೇಶದಿಂದ ಪ್ರಯೋಗಿಸಲಾದ ಪದ) ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ‘ರಾಮಾಯಣ’ ಚಿತ್ರದ ಟೈಟಲ್‌ ಟೀಸರ್‌ ಲಾಂಚ್‌.. ರಾಮ-ರಾವಣನ ಅದ್ಧೂರಿ ಝಲಕ್​ಗೆ ಫ್ಯಾನ್ಸ್​ ಫಿದಾ!

Btv Kannada
Author: Btv Kannada

Read More