ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ SC ಸಮುದಾಯದ ಜಾತಿಗಣತಿ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಜಾತಿಗಣತಿ ವೇಳೆ ಪಾಲಿಕೆ ಸಿಬ್ಬಂದಿ ಗೂಂಡಾಗಿರಿ ನಡೆಸಿದ್ದಾರೆ. ಕುಟುಂಬದ ಮಾಹಿತಿ ಪಡೆಯದೇ ಪೌರ ಕಾರ್ಮಿಕ ಸ್ಟಿಕ್ಕರ್ ಅಂಟಿಸಿದ್ದು, ಸರ್ವೇ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕರ ಮೇಲೆ ಪಾಲಿಕೆ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಚಿಕ್ಕಕಲ್ಲಸಂದ್ರದ ಸಾರ್ವಭೌಮನಗರದಲ್ಲಿ ನಡೆದಿದೆ.
ಪಾಲಿಕೆ ಸಿಬ್ಬಂದಿ ಮನೆ ಮಾಲೀಕರ ಮಾಹಿತಿ ಪಡೆಯದೇ ಸ್ಟಿಕ್ಕರ್ ಅಂಟಿಸಿದ್ದಕ್ಕೆ ಪ್ರಶ್ನಿಸಿದ ಮನೆ ಮಾಲೀಕ ಪ್ರಶ್ನಿಸಿದ್ದಾನೆ. ಈ ವೇಳೆ ಪಾಲಿಕೆ ಸಿಬ್ಬಂದಿ ನಂದೀಶ್ ಎಂಬುವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪಾಲಿಕೆ ಸಿಬ್ಬಂದಿಯ ಗೂಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಾಲಿಕೆ ಸಿಬ್ಬಂದಿಯ ವಿರುದ್ಧ ಮನೆ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ಸರಿಯಾಗಿ ಸರ್ವೇ ಮಾಡದೇ ಹಲ್ಲೆಗೆ ಮುಂದಾದ ಪಾಲಿಕೆ ನಡೆಗೆ ಕಿಡಿ ಕಾರಿದ್ದಾರೆ. ಈ ಘಟನೆ ಸಂಬಂಧ ದೂರು ದಾಖಲಿಸೋ ಬದಲು ಪೊಲೀಸರು ರಾಜಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ – ನಗರದಲ್ಲಿ ಮತ್ತೆ 36 ಆಟೋಗಳು ಸೀಜ್.. 163 ಪ್ರಕರಣ ದಾಖಲು!
