ಹಾಲು ಉತ್ಪಾದನೆಯಲ್ಲಿ KMF ಹೊಸ ಮೈಲಿಗಲ್ಲು.. ಜೂನ್​​ನಿಂದ ರಾಜ್ಯದಲ್ಲಿ ನಿತ್ಯ 1.5 ಕೋಟಿ ಲೀಟರ್ ಹಾಲು ಸಂಗ್ರಹ!

ಬೆಂಗಳೂರು : ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲಿಗಲ್ಲು ಸಾಧಿಸಿದೆ. ಕಳೆದ ಜೂನ್​​ನಿಂದ ನಿತ್ಯ 1.05 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದ ಡೈರಿ ವಲಯದಲ್ಲಿ ಕರ್ನಾಟಕ ಹಾಲು ಒಕ್ಕೂಟ ಹೊಸ ದಾಖಲೆ ಸೃಷ್ಟಿಸಿದೆ.

ಕರ್ನಾಟಕದಲ್ಲಿ ಜೂನ್​​ ತಿಂಗಳಿಂದ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, ಅನುಕೂಲಕರವಾದ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣ ಈ ದಾಖಲೆ ಮಾಡುವುದು ಕೆಎಂಎಫ್​ಗೆ ಸಾಧ್ಯವಾಗಿದೆ.

ಕಳೆದ ವರ್ಷ ಜೂನ್-ಜುಲೈನಲ್ಲಿ 90 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗಿತ್ತು. ಆನಂತರ ದೈನಂದಿನ ಸರಾಸರಿ ಸಂಗ್ರಹ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿತ್ತು. ಇದರೊಂದಿಗೆ, ಹಾಲು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಕರ್ನಾಟಕ ತನ್ನ ಛಾಪು ಮುಂದುವರಿಸಿದೆ.

ಸದ್ಯ ಒಂದು ತಿಂಗಳಿಂದ ನಿರಂತರವಾಗಿ 1 ಕೋಟಿ 5 ಲಕ್ಷ ಹಾಲು ಸಂಗ್ರಹವಾಗ್ತಿರೋದು ಇದೇ ಮೊದಲು. ವಾತಾವರಣ ತಂಪಾದ ಕಾರಣ ಹಸಿರು ಮೇವು ಸಿಕ್ಕಿದ ಕಾರಣ ಹಾಲು ಸಂಗ್ರಹ ಹೆಚ್ಚಳವಾಗಿದ್ದು, ಪ್ರಸ್ತುತ ಸಂಗ್ರಹವಾದ 1.05 ಕೋಟಿ ಲೀಟರ್​ ಹಾಲಿನಲ್ಲಿ 80 ಲಕ್ಷ ಲೀಟರ್ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಸಂಗ್ರಹವಾದ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ, ಮೊಸರು ವಿವಿಧ ಮೌಲ್ಯವರ್ಧಿತ ಉತ್ಪನ್ನ ತಯಾರಿಸಲಾಗುತ್ತಿದೆ. ಈ ಬಾರಿ KMF ಮಳೆಗಾಲದಲ್ಲೇ 1.25 ಕೋಟಿ ಹಾಲು ಸಂಗ್ರಹ ಗುರಿ ಹೊಂದಿದೆ.

ಇದನ್ನೂ ಓದಿ : ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ – ನಗರದಲ್ಲಿ ಮತ್ತೆ 36 ಆಟೋಗಳು ಸೀಜ್​​.. 163 ಪ್ರಕರಣ ದಾಖಲು!

Btv Kannada
Author: Btv Kannada

Read More