ನಿವೃತ್ತ ಡಿಜಿ ಓಂಪ್ರಕಾಶ್ ಪುತ್ರಿಯಿಂದ ದಾಂಧಲೆ – ನಂದಿನಿ ಪಾರ್ಲರ್‌ಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ.. ವಸ್ತುಗಳೆಲ್ಲಾ ಪೀಸ್ ಪೀಸ್!

ಬೆಂಗಳೂರು : ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದ ನಿವೃತ್ತ ಡಿಜಿ ಓಂಪ್ರಕಾಶ್ ಅವರ ಪುತ್ರಿ ದಾಂಧಲೆ ಮಾಡಿಕೊಂಡಿದ್ದಾರೆ. ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

ಸಿಬ್ಬಂದಿಗೆ ಕೂಡ ಕೃತಿಕಾ ಥಳಿಸಿದ್ದು, ಅವರ ವರ್ತನೆಗೆ ಸ್ಥಳೀಯರು ಶಾಕ್ ಆಗಿದ್ದಾರೆ. ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆಯಾದ ನಂತರ ಸಹೋದರ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಇಡೀ ಮನೆಯಲ್ಲಿ ಮಗಳು ಕೃತಿಕಾ ಒಂಟಿಯಾಗಿ ವಾಸವಾಗಿದ್ದಾರೆ.

ಕಳೆದ ಸೋಮವಾರ ಸಂಜೆ ಮನೆಯ ಪಕ್ಕದ ನಂದಿನಿ ಪಾರ್ಲರ್‌ಗೆ ಕೃತಿಕಾ ಬಂದಿದ್ದರು. ಅಂಗಡಿ ಮುಂದೆ ಸ್ವಲ್ಪ ಹೊತ್ತು ಹಾಗೇ ನಿಂತು ಅಲ್ಲಿನ ಮಾಲೀಕನನ್ನು ದಿಟ್ಟಿಸಿ ನೋಡಿದ್ರು. ಇದನ್ನು ನೋಡಿದ ಮಾಲೀಕ, ‘ಯಾಕೆ ಮೇಡಂ ಏನಾಯ್ತು’ ಅಂತಾ ಕೇಳಿದ್ದ. ಈ ವೇಳೆ ಕೋಪಗೊಂಡ ಕೃತಿಕಾ ಏಕಾಏಕಿ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊಡೆದು ಪೀಸ್ ಪೀಸ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ, ತಡೆಯೋಕೆ ಬಂದ ಮಾಲೀಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಆಕೆಯ ವರ್ತನೆಯಿಂದ ಭಯಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರನ್ನು ನೋಡಿ ಏನೂ ಆಗೇ ಇಲ್ಲ ಎಂಬಂತೆ ಕೃತಿಕಾ ಮನೆಗೆ ಹೋಗಿದ್ದಾರೆ. ತಂದೆ ಕೊಲೆಯಾಗಿದ್ದಾರೆ, ತಾಯಿ ಜೈಲು ಸೇರಿದ್ದಾರೆ. ಸಹೋದರ ಮನೆ ಬಿಟ್ಟು ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಸದ್ಯ ಇಡೀ ಮನೆಯಲ್ಲಿ ಏಕಾಂಗಿಯಾಗಿ ಕೃತಿಕಾ ವಾಸವಾಗಿದ್ದಾರೆ.

ಇದನ್ನೂ ಓದಿ : ಸಮ್ಮೇಳನಗಳ ಹಣ ದುರುಪಯೋಗ ಆರೋಪ – ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ವಿಚಾರಣೆಗೆ ಆದೇಶ!

Btv Kannada
Author: Btv Kannada

Read More