ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ.. 1 ತಿಂಗಳು ಸಂಪೂರ್ಣ ಬಂದ್!

ಚಿಕ್ಕಮಗಳೂರು : ಜಿಲ್ಲೆಯ ಕೆಲವೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಒಂದು ತಿಂಗಳು ಎತ್ತಿನಭುಜ ಚಾರಣವನ್ನು ಬಂದ್ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜಕ್ಕೆ ಪ್ರವಾಸಿಗರು 7 ಕಿ.ಮೀ. ಚಾರಣ ಮಾಡಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು. ಆದರೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬಿಟ್ಟು ಬಿಡದೇ ಭಾರೀ ಮಂಜು ಕವಿಯುತ್ತಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಚಾರಣಕ್ಕೆ ಬ್ರೇಕ್ ಹಾಕಿದೆ.

ಚಾರಣ ಮಾಡುವ ವೇಳೆ ಅನಾಹುತವಾದರೆ ರಕ್ಷಣೆ ಮಾಡೋದು ಭಾರೀ ಕಷ್ಟಸಾಧ್ಯ. ಜೊತೆಗೆ ಯಾವುದೇ ವಾಹನಗಳು ಹೋಗುವುದಿಲ್ಲ, ಹೊತ್ತೇ ತರಬೇಕು. ಅಲ್ಲದೇ ಕಾಡುಪ್ರಾಣಿಗಳ ಕಾಟ, ಮಳೆ, ಜಾರುವ ಪ್ರದೇಶವಾಗಿದ್ದು, ಸ್ಥಳೀಯರು ಚಾರಣವನ್ನ ಬಂದ್ ಮಾಡುವಂತೆ ಆಗ್ರಹಿಸಿದ್ದರು.

ಹೀಗಾಗಿ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ಎತ್ತಿನಭುಜದಲ್ಲಿ ಓರ್ವ ಕಾವಲುಗಾರನ ನೇಮಿಸಲು ಸೂಚಿಸಲಾಗಿದೆ.

ಇದನ್ನೂ ಓದಿ : ರೊಮ್ಯಾಂಟಿಕ್ ಮೂಡ್​ನಲ್ಲಿ ರಾಕಿಭಾಯ್​​.. ಪ್ರೀತಿಯ ಮಡದಿ ರಾಧಿಕಾಳನ್ನು ಎತ್ತಿ ಮುದ್ದಾಡಿದ ಯಶ್!

Btv Kannada
Author: Btv Kannada

Read More