ಮೈಸೂರು : ಆಷಾಢ ಮಾಸ ಹಿನ್ನೆಲೆ ಹ್ಯಾಟ್ರಿಕ್ ಹೀರೋ ಶಿವಣ್ಣ ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದು, ನಾಡದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಶಿವಣ್ಣ ನೋಡಿ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದು, ನಗುತ್ತಾ ಶಿವಣ್ಣ ಎಲ್ಲರಿಗೂ ಸೆಲ್ಫಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಶಿವರಾಜ್‌ಕುಮಾರ್ ಮೈಸೂರು ಭಾಗದ ಸುತ್ತಮುತ್ತ ಪ್ರವಾಸ ಕೈಗೊಂಡಿದ್ದಾರೆ. ಮೊನ್ನೆಯಷ್ಟೇ ಪತ್ನಿ ಜೊತೆಗೂಡಿ ಶಿವಣ್ಣ ಕಬಿನಿ ಡ್ಯಾಂಗೆ ಭೇಟಿ ನೀಡಿದ್ದರು. ಈ ವೇಳೆ ಹಾಡಿ ಮಕ್ಕಳ ಜೊತೆ ಫೋಟೊ ಕೂಡ ತೆಗೆಸಿಕೊಂಡಿದ್ದರು.
ನಟ ಶಿವರಾಜ್‌ಕುಮಾರ್ ಸದ್ಯ 125 ಸಿನಿಮಾಗಳನ್ನು ಪೂರೈಸಿದ್ದಾರೆ. ಸದ್ಯ ಅವರ ಕೈಯಲ್ಲಿ ಐದಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಿವೆ. ಇನ್ನು ಶಿವರಾಜ್ ಕುಮಾರ್ ಚಿತ್ರ ನಿರ್ಮಾಣ ಸಂಸ್ಥೆ ಓಪನ್ ಮಾಡಿದ್ದಾರೆ. ಇದಕ್ಕೆ ಪತ್ನಿ ಗೀತಾ ಅವರ ಹೆಸರನ್ನೆ ಇಟ್ಟಿದ್ದಾರೆ. ಗೀತಾ ಪಿಕ್ಚರ್ಸ್ ಅನ್ನೋ ಈ ಸಂಸ್ಥೆ ಮೂಲಕ ಮೊದಲು ವೇದ ಚಿತ್ರ ನಿರ್ಮಾಣ ಆಗಿದೆ. ಭೈರತಿ ರಣಗಲ್ ಎರಡನೇ ಚಿತ್ರ ಆಗಿದೆ.
ಇದನ್ನೂ ಓದಿ : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಕೇಸ್ – ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ಅಮಾನತು!







