ಶಿವಮೊಗ್ಗ : ಹೃದಯಾಘಾತಕ್ಕೆ ಯುವತಿಯೊಬ್ಬಳು ಬಲಿಯಾಗಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಮೂಲದ ಹರ್ಷಿತಾ (23) ಮೃತ ದುರ್ದೈವಿ.
ಹರ್ಷಿತಾ ಒಂದೂವರೆ ತಿಂಗಳ ಬಾಣಂತಿಯಾಗಿದ್ದಳು. ಬಾಣಂತನಕ್ಕಾಗಿ ಆಯನೂರು ಬಳಿಯ ಮಂಡಘಟ್ಟಕ್ಕೆ ಹರ್ಷಿತಾ ಬಂದಿದ್ದಳು. ಮೊನ್ನೆ ರಾತ್ರಿ ಹರ್ಷಿತಾಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹಾಸನದಲ್ಲಿದ್ದ ಗಂಡನನ್ನು ಹರ್ಷಿತಾ ಕರೆಸಿಕೊಂಡಿದ್ದಳು. ನಿನ್ನೆ ಬೆಳಗ್ಗೆ ಆಯನೂರು ಆಸ್ಪತ್ರೆಗೆ ಅಂಬ್ಯುಲೆನ್ಸ್ನಲ್ಲಿ ಹೋಗುವಾಗ ಮಾರ್ಗಮಧ್ಯೆ ಜೀವ ಬಿಟ್ಟಿದ್ದಾಳೆ.
ವರ್ಷದ ಹಿಂದೆ ಮದುವೆಯಾಗಿದ್ದ ಹರ್ಷಿತಾ, ಬಾಣಂತನಕ್ಕೆ ಹೋಗಿದ್ದಾಗ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಸದ್ಯ ಗಂಡನ ಮನೆ ಹಾಸನದ ಕೊಮ್ಮನಹಳ್ಳಿಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.
ಹಾಸನದಲ್ಲಿ ಮುಂದುವರೆದ ಹೃದಯಾಘಾತದ ಮರಣ ಮೃದಂಗ : ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಐದು ಹೃದಯಾಘಾತ ಪ್ರಕರಣ ವರದಿಯಾಗಿದೆ. ಸದ್ಯ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಕೇವಲ 40 ದಿನಗಳಲ್ಲಿ 24 ಜನರಿಗೆ ಹೃದಯಾಘಾತ ಆಗಿದೆ.
ಇದನ್ನೂ ಓದಿ : ಗೃಹ ಸಚಿವರ ಮನೆ ಪಕ್ಕದಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿಯ ರಂಪಾಟ.. ತಬ್ಬಿಬ್ಬಾದ ಸ್ಥಳೀಯರು!
