‘ಟಾಕ್ಸಿಕ್’-‘ರಾಮಾಯಣ’ ಶೂಟ್ ಮುಗಿಸಿ ಫ್ಯಾಮಿಲಿ ಜೊತೆ USAಗೆ ಹಾರಿದ ರಾಕಿ ಭಾಯ್!

ನಟ ಯಶ್ ಅವರು ಇತ್ತೀಚೆಗೆ ಸಿನಿಮಾ ಕೆಲಸಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ರಾಕಿ ಭಾಯ್​ಗೆ​ ವೆಕೇಶನ್ ತೆರಳಲು ಟೈಮ್​ ಸಿಕ್ಕಿರಲಿಲ್ಲ. ಇದೀಗ ಯಶ್​ ಒಂದು ಹಂತದ ಶೂಟಿಂಗ್​ ಕೆಲಸಗಳನ್ನು ಮುಗಿಸಿ ಪ್ರವಾಸಕ್ಕೆ ಹೊರಟಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳು ಜೊತೆ USAಗೆ ಪ್ರಯಾಣ ಬೆಳೆಸಿದ್ದಾರೆ. ಯಶ್​​ ಒಂದಷ್ಟು ಸಮಯವನ್ನು ಕುಟುಂಬದ ಜೊತೆ ಕಳೆದು ಮತ್ತೆ ಭಾರತಕ್ಕೆ ವಾಪಸ್​ ಆಗಲಿದ್ದಾರೆ.

ಯಶ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರೋ ಫೋಟೋಗಳು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರು ಅಮೆರಿಕಕ್ಕೆ ತೆರಳಿದ್ದಾಗಿ ವರದಿಯಾಗಿದೆ. ಜುಲೈ 3ರಂದು ರಾಮಾಯಣ ಚಿತ್ರದ ಮೊದಲ ಗ್ಲಿಂಪ್ಸ್​ ಬಿಡುಗಡೆಯಾಲಿದ್ದು, ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಯಶ್ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಅವರು ಬಯಸುತ್ತಾರೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು. ಆ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಆದರು. ಇದಕ್ಕಾಗಿ ಬೆಂಗಳೂರು, ಮುಂಬೈ ಹಾಗೂ ಗೋವಾ ಕಡೆಗಳಲ್ಲಿ ಸುತ್ತಾಡಿದರು. ಇದು ಪೂರ್ಣಗೊಳ್ಳುತ್ತಿದ್ದಂತೆ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಕೊಂಡರು.

ಇನ್ನು ಕಳೆದ ಕೆಲವು ವಾರಗಳಿಂದ ಯಶ್ ಅವರು ಮುಂಬೈನಲ್ಲಿ ನೆಲೆಸಿದ್ದರು. ತಮ್ಮನ್ನು ತಾವು ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಆಗಿರುವುದರಿಂದ ಅವರು ಹೆಚ್ಚಿನ ಶ್ರಮ ಹಾಕುವ ಅಗತ್ಯವಿದೆ. ಇದು ಭಾವನಾತ್ಮಕವಾಗಿಯೂ ಹೆಚ್ಚು ಚಾಲೆಂಜಿಂಗ್. ಈ ಕಾರಣದಿಂದಲೇ ಯಶ್​ಗೆ ಒಂದು ಬ್ರೇಕ್ ಬೇಕಿತ್ತು. ಅದನ್ನು ಅವರು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಸೂಕ್ತ ವಾದ ಮಂಡಿಸದ ಸರ್ಕಾರಿ ವಕೀಲರು – IPS ವಿಕಾಸ್ ಕುಮಾರ್ ಸಸ್ಪೆನ್ಷನ್ ರದ್ದು.. ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ!

Btv Kannada
Author: Btv Kannada

Read More