ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಟ್ಟು 26 ರೋಗಿಗಳು ಇದ್ದ ವಾರ್ಡ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹಾಗೂ ಹೊಗೆ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ವೈದ್ಯರು ಹಾಗೂ ಸಿಬ್ಬಂದಿ ದಿಢೀರ್ ಅಲರ್ಟ್ ಆಗಿ ಎಲ್ಲಾ ರೋಗಿಗಳನ್ನು ಹೆಚ್ ಬ್ಲಾಕ್ಗೆ ಶಿಫ್ಟ್ ಮಾಡಿದ್ದಾರೆ. ಬೆಂಕಿ ಕಂಡು ರೋಗಿಗಳು ಗಾಬರಿಗೊಂಡಿದ್ದು, ಅದೃಷ್ಟವಶಾತ್ ಅಗ್ನಿ ಅವಘಡದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮದ ದಳದ ಸಿಬ್ಬಂದಿಗಳು ಯಶಸ್ವಿಯಾಗಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅಗ್ನಿ ಅವಘಡ ಹಿನ್ನೆಲೆ ಆಸ್ಪತ್ರೆಯಲ್ಲಿದ್ದ ಬುಕ್, ಬೆಡ್ ಎಲ್ಲಾ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಂಡ ಸ್ಥಳದಲ್ಲಿ ಫ್ರಿಡ್ಜ್ ಇದ್ದು, ಫ್ರಿಡ್ಜ್ಗೆ ಬೆಂಕಿ ತಗುಲಿ ಸುಟ್ಟು ಗಾಯಗಳ ವಿಭಾಗದ ಗ್ರೌಂಡ್ ಪ್ಲೋರ್ ಹೊಗೆ ಕಾಣಿಸಿದೆ. ಈ ವೇಳೆ ವೈದ್ಯ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಆಗಬೇಕಿದ್ದ ದೊಡ್ಡ ದುರಂತ ತಪ್ಪಿದೆ.
ವೈದ್ಯೆ ದಿವ್ಯಾ ನೇತೃತ್ವದ ತಂಡ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 3.30ರ ಸುಮಾರಿಗೆ ಡಾ. ದಿವ್ಯಾ ಮೊದಲ ಮಹಡಿಗೆ ಹೋಗಿದ್ದರು. ಈ ವೇಳೆ ಸೆಮಿನರ್ ರೂಂನಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಲರ್ಟ್ ಆದ ಡಾ. ದಿವ್ಯಾ ಮತ್ತು ಸಿಬ್ಬಂದಿಗಳು ಕೋಡ್ ರೆಡ್ ಅಲರ್ಟ್ ಮಾಡಿ ರೋಗಿಗಳ ರೆಸ್ಕ್ಯೂ ಕಾರ್ಯಾಚರಣೆ ಮಾಡಿದ್ದಾರೆ. ಸೂಪರಿಂಟೆಂಡೆಂಟ್ಗಳಿಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಸುಮಾರು 30 ನಿಮಿಷದಲ್ಲಿ ಎಲ್ಲಾ ರೋಗಿಗಳ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿದ್ದವರು ಸೇರಿ ಎಲ್ಲರನ್ನೂ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ಅಮಾಯಕನನ್ನು ಸುಳ್ಳು ಕೊಲೆ ಕೇಸ್ನಲ್ಲಿ ಫಿಟ್ ಮಾಡಿ ಜೈಲಿಗೆ ಕಳುಹಿಸಿದ ಮೂವರು ಪೊಲೀಸರು ಸಸ್ಪೆಂಡ್!
