ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ 11 ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್ಬಾಸ್ ಸೀಸನ್ 12 ಬಂದೇ ಬಿಡ್ತು. ಈಗಾಗಲೇ ಸೀಸನ್ 11 ಮುಕ್ತಾಯಗೊಂಡು 5 ತಿಂಗಳು ಪೂರ್ಣಗೊಂಡಿದೆ. ಮುಂದಿನ ಸೀಸನ್ಗಾಗಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಅಪ್ಡೇಟ್ ಕೊಡೋದಕ್ಕೆ ಮುಂದಾಗಿದೆ ತಂಡ.
ಹೌದು, ಜೂನ್ 30 ಅಂದ್ರೆ ಇಂದು ಸಂಜೆ 4 ಗಂಟೆಗೆ ಬಿಗ್ಬಾಸ್ ತಂಡ ಪ್ರೆಸ್ ಮೀಟ್ ಇಟ್ಟುಕೊಂಡಿದೆ. ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದೆ. ಅಲ್ಲದೇ ಬಿಗ್ಬಾಸ್ ಸೀಸನ್ 12 ಕುರಿತು ಬಿಗ್ ಬಾಸ್ ತಂಡ ಮಾಹಿತಿ ನೀಡಲಿದೆ. ಈ ವೇಳೆ ಕಿಚ್ಚ ಸುದೀಪ್ ಈ ಬಾರಿ ಹೋಸ್ಟ್ ಮಾಡಲಿದ್ದಾರಾ ಅನ್ನೋ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ.
ಇನ್ನು, ಈ ಬಾರಿಯ ಬಿಗ್ಬಾಸ್ ಸೀಸನ್ 12ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್ ನಟ, ನಟಿಯರು, ಸೋಷಿಯಲ್ ಮೀಡಿಯಾ ಸ್ಟಾರ್ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ : 5 ಹುಲಿಗಳ ಸಾವು ಪ್ರಕರಣ – ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ದ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ದೂರು!







