ತುಮಕೂರು : ಜಿಲ್ಲೆಯ ಕುಣಿಗಲ್ ಬೈಪಾಸ್ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕ್ಯಾಂಟರ್ ಲಾರಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪತಿ, ಪತ್ನಿ, ಮಗ, ಮಗಳು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಸಿಬೇಗೌಡ (48), ಶೋಭಾ (42), ದುಂಬಿಶ್ರೀ (16), ಭಾನು ಕಿರಣ್ ಗೌಡ (14) ಮೃತ ದುರ್ದೈವಿಗಳು.
ಮೃತರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ನವರು ಎಂದು ತಿಳಿದುಬಂದಿದೆ. ಕುಣಿಗಲ್ ಬೈಪಾಸ್ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಕಾರನ್ನು ಯುಟರ್ನ್ ತೆಗೆದುಕೊಳ್ಳುವಾಗ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಸಿಬೇಗೌಡ ಅವರು ಕುಟುಂಬ ಸಮೇತ ಮಾಗಡಿ ಪಟ್ಟಣದಲ್ಲಿ ವಾಸವಾಗಿದ್ದರು. ಸಿಬೇಗೌಡ ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಾಗೂ ಒಬ್ಬ ಗಂಡು ಮಗ ಇದ್ದನು. ಹಿರಿಯ ಮಗಳಿಗೆ ಮದುವೆ ಮಾಡಲಾಗಿದೆ. ಭಾನುಕಿರಣ್ ಗೌಡ ಕುಣಿಗಲ್ ಬಳಿಯಿರುವ ಅರವಿಂದ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಭಾನುವಾರ (ಜೂ.29) ಅರವಿಂದ್ನನ್ನು ಶಾಲೆಯ ವಸತಿ ನಿಲಯಕ್ಕೆ ಬಿಟ್ಟು ಬರಲು ಸಿದ್ದೇಗೌಡ ಅವರು ಒಂದೇ ಕಾರಿನಲ್ಲಿ ಕುಟುಂಬ ಸಮೇತ ಬಂದಿದ್ದರು.
ಆದ್ರೆ ಕುಣಿಗಲ್ ಬೈಪಾಸ್‌ನಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ಕ್ಯಾಂಟರ್, ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಮೃತದೇಹಗಳು ಕುಣಿಗಲ್ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಬೆಂಗಳೂರಿನ 60ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಇಂದು ಕರೆಂಟ್ ಕಟ್.. ಎಲ್ಲೆಲ್ಲಿ?
