KPCC ಸೋಶಿಯಲ್ ಮೀಡಿಯಾ ವಿಭಾಗ ಮುಖ್ಯಸ್ಥರಾಗಿ ಐಶ್ವರ್ಯ ಮಹದೇವ್ ನೇಮಕ!

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೊಸ ಮುಖ್ಯಸ್ಥರಾಗಿ ಐಶ್ವರ್ಯ ಮಹದೇವ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಆದೇಶ ಹೊರಡಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಐಶ್ವರ್ಯ ಅವರನ್ನು ತಕ್ಷಣದಿಂದ ಜಾರಿ ಬರುವಂತೆ ನೇಮಕ ಮಾಡಿದ್ದಾರೆ.

ಐಶ್ವರ್ಯ ಮಹದೇವ್
ಐಶ್ವರ್ಯ ಮಹದೇವ್

ಯಾರಿದು ಐಶ್ವರ್ಯ ಮಹದೇವ್​? ಎಐಸಿಸಿ ವಕ್ತಾರೆಯಾಗಿದ್ದ ಐಶ್ವರ್ಯ ಮಹದೇವ್ ಅವರು ಮಾಜಿ ಶಾಸಕ ದಿ. ಮಂಚನಹಳ್ಳಿ ಮಹಾದೇವ್ ಅವರ ಪುತ್ರಿ. ಮಂಚನಹಳ್ಳಿ ಮಹದೇವ್ ಅವರು 14 ವರ್ಷಗಳ ಹಿಂದೆ ಮೃತಪಟ್ಟಿದ್ದು, ಆ ಬಳಿಕ ಪುತ್ರಿ ಐಶ್ವರ್ಯ ಅವರು ಕ್ಷೇತ್ರ ಹಾಗೂ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್ ನಗರದ ನಿವಾಸಿಯಾಗಿರುವ ಐಶ್ವರ್ಯ ಮಹದೇವ್, ಅತಿ ಕಿರಿಯ ವಯಸ್ಸಿನಲ್ಲೇ ಮಹಿಳಾ ಘಟಕದ ಕಾರ್ಯದರ್ಶಿ ಪಟ್ಟಕ್ಕೇರಿದ್ದರು. ಜತೆಗೆ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆಯಾಗಿದ್ದರು. ಇವರು ವಕೀಲ ಪದವಿ ಪಡೆದಿದ್ದಾರೆ.

ಇದನ್ನೂ ಓದಿ : ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಗ್ರಾಮ ಪಂಚಾಯತ್‌ ಸದಸ್ಯ ಅರೆಸ್ಟ್‌!

 

Btv Kannada
Author: Btv Kannada

Read More