ವಕೀಲನ ಮೇಲೆ ಹಲ್ಲೆ ಮಾಡಿದ ಬಿಜೆಪಿ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎನ್. ವೇಣುಗೋಪಾಲ್ – ಪ್ರಕರಣ ದಾಖಲು!

ದೇವನಹಳ್ಳಿ : ವಕೀಲನ ಮೇಲೆ ಬಿಜೆಪಿ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎನ್. ವೇಣುಗೋಪಾಲ್ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ವಕೀಲ ಸಂದೀಪ್ ಮೇಲೆ ಜಿ.ಎನ್. ವೇಣುಗೋಪಾಲ್ ಮತ್ತು ಆತನ ಮಗ ವಿವೇಕ್ ಗೂಂಡಾವರ್ತನೆ ತೋರಿರುವ ಆರೋಪ ಕೇಳಿಬಂದಿದೆ.

ವಕೀಲ ತನ್ನ ಕಕ್ಷಿದಾರರ ಜಮೀನು ವೀಕ್ಷಣೆ ಮಾಡುತ್ತಿದ್ದಾಗ ಅಪ್ಪ ಮತ್ತು ಮಗ ಹಲ್ಲೆ ನಡೆಸಿದ್ದಾರೆ. ಸಂದೀಪ್ ಕಕ್ಷಿದಾರರ ಜಮೀನಿನಲ್ಲಿ ವೇಣುಗೋಪಾಲ್ ಅತಿಕ್ರಮವಾಗಿ ವಿದ್ಯುತ್ ಕಂಬ ಹಾಕಿದ್ದ. ಈ ವಿದ್ಯುತ್ ಕಂಬದ ವಿಚಾರವಾಗಿ ಕ್ಯಾತೆ ತೆಗೆದು ಅಪ್ಪ ಮಗ ವಕೀಲನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಕ್ಷಿದಾರರ ಮೇರೆಗೆ ವಕೀಲ ಸಂದೀಪ್ ದೂರು ನೀಡಿದ್ದಾರೆ. ದೂರಿನ ಸಂಬಂಧ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಪರಿವೀಕ್ಷಣೆಗಾಗಿ ತೆರಳಿದ್ದ ವೇಳೆ ದಾಳಿ ನಡೆಸಿದ್ದಲ್ಲದೆ, ಕೋರ್ಟ್ ಆವರಣದಲ್ಲಿಯೇ ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಜಿ.ಎನ್. ವೇಣುಗೋಪಾಲ್ ಮತ್ತು ಆತನ ಮಗ ವಿವೇಕ್ ಬೆದರಿಕೆ ಹಾಕಿದ್ದಾರೆ.

ಹಲ್ಲೆಗೀಡಾದ ವಕೀಲ ಸಂದೀಪ್ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಿಎನ್ ಎಸ್ ಕಾಯಿದೆ 115(2), 118(1), 126(2), 3(5), 351(2), 352 ಹಾಗೂ ವಕೀಲರ ಸಂರಕ್ಷಣಾ ಕಾಯ್ದೆ ಸಕ್ಷೆನ್ ಅಡಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡು ವೇಣುಗೋಪಾಲ್ ಆತನ ಮಗ ವಿವೇಕ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೈಯಲ್ಲಿ ಕೊಡಲಿ ಹಿಡಿದು ವಿಚಿತ್ರ ವೇಷ ಧರಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ – ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ HSR ಲೇಔಟ್ ಪೊಲೀಸರು!

Btv Kannada
Author: Btv Kannada

Read More