ಕೈಯಲ್ಲಿ ಕೊಡಲಿ ಹಿಡಿದು ವಿಚಿತ್ರ ವೇಷ ಧರಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ – ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ HSR ಲೇಔಟ್ ಪೊಲೀಸರು!

ಬೆಂಗಳೂರು : ಕೈಯಲ್ಲಿ ಕೊಡಲಿ ಹಿಡಿದು ವಿಚಿತ್ರ ವೇಷ ಧರಿಸಿದ್ದ ಅಪರಿಚಿತ ವ್ಯಕ್ತಿಯೋರ್ವನನ್ನು ಕಂಡು ನಗರದ HSR ಲೇಔಟ್​ ನಿವಾಸಿಗಳಲ್ಲಿ ಆತಂಕ ಹುಟ್ಟಿತ್ತು. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

HSR ಲೇಔಟ್ ಸಿಪಿಡಬ್ಲ್ಯೂಡಿ ಕ್ವಾಟ್ರಸ್ ಬಳಿ​ ಆ ವ್ಯಕ್ತಿ ಕೊಡಲಿ ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆತನ ವೇಷ ಕೂಡ ವಿಚಿತ್ರವಾಗಿದ್ದು, ವ್ಯಕ್ತಿ ಲಂಗ ಧರಿಸಿದ್ದ. ಇದನ್ನು ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಅಪರಿಚಿತ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ HSR ಲೇಔಟ್ ಪೊಲೀಸರು ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಅಪ್ಪನ ಆಸೆ ಈಡೇರಿಸಲು 101 ಜನರಿಗೆ ಕಾಶಿಯಾತ್ರೆ ಮಾಡಿಸುತ್ತಿರುವ ಜಿಮ್ ರವಿ!

Btv Kannada
Author: Btv Kannada

Read More