`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬಂಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗ ಪ್ರತಿ ವರ್ಷದಂತೆ ಚಂದನವನವನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ ‘ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಗಣ್ಯಾತಿಗಣ್ಯರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಂಡಿರೋದು ವಿಶೇಷ. ಪ್ರಮುಖ ದೃಶ್ಯಮಾಧ್ಯಮಗಳ ಮೂಲಕ ಈ ಅಪರೂಪದ ಕಾರ್ಯಕ್ರಮ ಕೊಟ್ಯಾಂತರ ಕನ್ನಡಿಗರನ್ನು ತಲುಪಲಿದೆ. ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿ ಹಿಡಿಯಲು ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ವೇದಿಕೆಯಾಗಬೇಕೆಂಬುದೇ ಚಿತ್ತಾರ ತಂಡದ ಆಶಯ. ಸ್ಯಾಂಡ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ ಚಿತ್ರರಂಗದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025′ ಹೆಸರಿನಲ್ಲಿ ಐದನೇ ಆವೃತ್ತಿಯನ್ನು ಹೆಮ್ಮೆಯಿಂದ ಚಿತ್ತಾರ ಕನ್ನಡಿಗರ ಮುಂದಿಟ್ಟಿದೆ.
ಸಿನಿಮಾ ಪ್ರೇಕ್ಷಕರ ಮನಸ್ಸಲ್ಲಿ ಬೆರೆತಿರುವ ಚಂದನವನದ ಅಸಾಮಾನ್ಯ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಹಾಗೂ ನಟನಟಿಯರನ್ನು ಗುರುತಿಸಿ ಗೌರವಿಸಿವುದು ನಮ್ಮ ಉದ್ದೇಶ ಈಡೆರಿದ್ದು, ಜಾಗತಿಕ ಮಟ್ಟದಲ್ಲಿ ಚಂದನವನದ ಅಭೂತಪೂರ್ವ ಸಾಧನೆಗೆ ಕನ್ನಡಿಯಾಗುವ `ಚಿತ್ತಾರ ಸ್ಟಾರ್ ಅವಾರ್ಡ್ಸ್, ಇಲ್ಲಿನ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ಏಕೈಕ ವೇದಿಕೆಯಾಗಿ ಹೊರ ಹೊಮ್ಮಿದೆ. ಕನ್ನಡದ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ, ಮೆಚ್ಚುಗೆ ವ್ಯಕ್ತಪಡಿಸುವುದು ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಹೊಸತನವನ್ನು ಕೂಡ ಉತ್ತೇಜಿಸುವ ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಐದನೇ ಆವೃತ್ತಿ ಇಡೀ ಚಿತ್ರರಂಗವನ್ನು ಒಗ್ಗೂಡಿಸುವಲ್ಲಿ ಸಫಲವಾಗಿದೆ.
`ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರಲ್ಲಿ 35ಕ್ಕೂ ಹೆಚ್ಚು ವಿಭಾಗಗಳಲ್ಲಿ, ಇನ್ನೂರಕ್ಕೂ ಹೆಚ್ಚು ಪ್ರತಿಭೆಗಳು ನಾಮನಿರ್ದೇಶನಗೊಂಡಿದ್ದು, ವೆಬ್‌ಸೈಟ್ ಮತ್ತು ವಾಟ್ಸ್ಆಪ್ ಮೂಲಕ ವೋಟಿಂಗ್ ಮಾಡುವ ಪ್ರಕ್ರಿಯೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 20,49,423 ಸಿನಿ ಪ್ರೇಮಿಗಳು ವೋಟ್ ಮಾಡಿದ್ದು, ಒಟ್ಟು 35ಕ್ಕೂ ಹೆಚ್ಚು ವಿಭಾಗಳಲ್ಲಿ ಲಕ್ಷಕ್ಕೂ ಹೆಚ್ಚು ವೋಟಿಂಗ್ ನಡೆದಿದೆ. ಪ್ರತೀ ವಿಭಾಗದಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದ್ದು, ಪಬ್ಲಿಕ್ ವೋಟಿಂಗ್‌ನ್ನು ಆಧಾರವಾಗಿಟ್ಟುಕೊಂಡು ‘ಆಯ್ಕೆ ಸಮಿತಿ’ ಸದಸ್ಯರು ಅಸಲಿ ಪ್ರತಿಭೆಗಳಿಗೆ ನ್ಯಾಯ ಸಲ್ಲಿಸಲಿದ್ದಾರೆ.
`ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ಪ್ರಶಸ್ತಿಗೆ ಭಾಜನರಾದ ನಟ/ನಟಿ, ತಂತ್ರಜ್ಞರ ಸಂಪೂರ್ಣ ವಿವರ :















ಇದನ್ನೂ ಓದಿ : “ಜಸ್ಟ್ ಮ್ಯಾರೀಡ್” ಚಿತ್ರದ ‘ಕರುಣಾಕರ’ ಪಾತ್ರದಲ್ಲಿ ಖ್ಯಾತ ನಟ ಅಚ್ಯುತ್ ಕುಮಾರ್!







