ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಮಹಿಳಾ ಪ್ರಧಾನ ಸಿನಿಮಾದ ಫಸ್ಟ್ ಪೋಸ್ಟರ್ ಹಾಗೂ ಟೈಟಲ್ ರಿಲೀಸ್ ಆಗಿದೆ. ನಿನ್ನೆ ಆಕ್ಷನ್-ಪ್ಯಾಕ್ಡ್ ಪೋಸ್ಟರ್‌ನೊಂದಿಗೆ ಸಿನಿಮಾ ಘೋಷಿಸಲಾಯಿತು. ಇಂದು ಪವರ್ ಫುಲ್ ಲುಕ್ ನೊಂದಿಗೆ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಲಾಗಿದೆ.
ಸಿನಿಮಾಗೆ ಮೈಸಾ ಎಂದು ಹೆಸರಿಡಲಾಗಿದ್ದು, ಅನ್‌ಫಾರ್ಮುಲಾ ಫಿಲ್ಮ್ಸ್‌ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ರಶ್ಮಿಕಾ ಅಭಿನಯದ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದ್ದು ಚಿತ್ರಕ್ಕೆ ನಿರ್ದೇಶಕ ಹನು ರಾಘವಪುಡಿ ಅವರ ಶಿಷ್ಯ ರವೀಂದ್ರ ಪುಲ್ಲೆ ಮೈಸಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ರವೀಂದ್ರ ಪುಲ್ಲೆ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಸಿನಿಮಾಗೆ ಅಜಯ್ ಮತ್ತು ಅನಿಲ್ ಸಯ್ಯಾಪುರರೆಡ್ಡಿ ನಿರ್ಮಾಪಕರಾಗಿದ್ದರೆ, ಸಾಯಿ ಗೋಪಾ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ.
ಮೈಸಾ ಸಿನಿಮಾದ ಪೋಸ್ಟರ್ ಅನ್ನು ರಶ್ಮಿಕಾ ಅವರ ಕುಬೇರಾ ಸಹನಟ ಧನುಷ್ ಮತ್ತು ಚಾವಾ ಸಹನಟ ವಿಕ್ಕಿ ಕೌಶಲ್, ದುಲ್ಕರ್ ಸಲ್ಮಾನ್ ಮತ್ತು ಶಿವರಾಜ್ ಕುಮಾರ್ ಡಿಜಿಟಲ್ ಲಾಂಚ್ ಮಾಡಿ ರಶ್ಮಿಕಾ ಮತ್ತು ಮೈಸಾ ತಂಡಕ್ಕೆ ಶುಭ ಹಾರೈಸಿದರು. ಮೈಸಾ ಎಂದರೆ ಇನ್ನೂ ನೋಡಿರದ ಎನ್ನುವ ಅರ್ಥವಾಗಿದೆ. ಪೋಸ್ಟರ್ ನಲ್ಲಿ ರಶ್ಮಿಕಾ ಲುಕ್ ಕೂಡ ಹಾಗೆಯೇ ಇದೆ. ಇಷ್ಟು ದಿನಗಳ ಕಾಲ ರೊಮ್ಯಾಂಟಿಕ್, ಬ್ಯೂಟಿಫುಲ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದ ರಶ್ಮಿಕಾ ಇದೇ ಮೊದಲ ಬಾರಿಗೆ ಪ್ರೇಕ್ಷಕರು ಹಿಂದೆಂದೂ ನೋಡಿರದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಪೋಸ್ಟರ್ ನಲ್ಲಿ ಸಾಂಪ್ರದಾಯಿಕ ಸೀರೆ ಉಟ್ಟು, ಮೂಗುತಿ ಮತ್ತು ಕುತ್ತಿಗೆ ಆಭರಣಗಳನ್ನ ಧರಿಸಿ ಗೋಂಡ್ ಬುಡಕಟ್ಟು ಮಹಿಳೆ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಮೈಸಾ ಗೊಂಡ್ ಬುಡಕಟ್ಟು ಜನಾಂಗದ ಅತ್ಯಂತ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ.
ಮೈಸಾ ಸಿನಿಮಾದ ಕಥೆಗಾಗಿ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದು ಸದ್ಯ ನಾವು ಈ ಕಥೆಯನ್ನು ಜಗತ್ತಿಗೆ ಹೇಳಲು ಸಿದ್ಧರಿದ್ದೇವೆ” ಎಂದು ನಿರ್ದೇಶಕ ರವೀಂದ್ರ ಪುಲ್ಲೆ ಹೇಳಿದ್ದಾರೆ. ಸದ್ಯ ಪೋಸ್ಟರ್ ಮೂಲಕ ಸದ್ದು ಮಾಡ್ತಿರೋ ಮೈಸಾ ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ.
ಇದನ್ನೂ ಓದಿ : ಯಶವಂತಪುರ ACP ಮೇರಿ ಶೈಲಜಾ ಸಸ್ಪೆಂಡ್ ಮಾಡಲು ಮಾನವ ಹಕ್ಕು ಆಯೋಗ ಆದೇಶ!
