ಬೆಂಗಳೂರು : ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನ್ಯಾ. ಕೃಷ್ಣಕುಮಾರ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.
ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಎಸ್ ಪಿಪಿ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಜಾಮೀನು ಅರ್ಜಿ ವಜಾಗೊಳಿಸುವಂತೆ ಎಸ್ಪಿಪಿ ಮನವಿ ಮಾಡಿದ್ದಾರೆ.
ವಿಚಾರಣಾಧೀನ ಕೈದಿಗಳು ಮೊದಲು ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನಿಗೆ ಹೋಗ್ಬೇಕು. ಆದ್ರೆ ನೇರವಾಗಿ ಪ್ರಜ್ವಲ್ ರೇವಣ್ಣ ಹೈಕೋರ್ಟ್ಗೆ ಯಾಕೆ ಬಂದಿದ್ದು? ಇಲ್ಲಿ ಅಂಥಹ ವಿಶೇಷ ಆಧಾರ ಏನಿದೆ? ನೇರವಾಗಿ ಹೈಕೋರ್ಟ್ಗೆ ಹಾಕಿರುವ ಅರ್ಜಿಯನ್ನ ಹೈಕೋರ್ಟ್ ಪರಿಗಣಿಸಬಾರದು. ಅದಕ್ಕೆ ಹೈಕೋರ್ಟ್ನ ಸಮಗ್ರ ತೀರ್ಪು ಇದೆ. ಹಾಗಾಗಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸುವಂತೆ ಎಸ್ಪಿಪಿ ಮನವಿ ಮಾಡಿದ್ದಾರೆ.
ಪರಿಸ್ಥಿತಿ ಬದಲಾಗಿದೆ ಅಂತಾ ತೋರಿಸೋಕೆ ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯಕ್ಕೆ ಹೋಗಬೇಕಾ? ಪರಿಸ್ಥಿತಿ ಬದಲಾಗಿದೆ, ಆದ್ರೆ ಅದಕ್ಕೆ ಜಾಮೀನು ನೀಡಬೇಕು ಅಂತಾ ಇಲ್ಲ. ಪ್ರಜ್ವಲ್ ನಡತೆ ಆಧರಿಸಿದರೆ ಅರ್ಜಿ ಊರ್ಜಿತವಲ್ಲ. ಪ್ರಕರಣ ದಾಖಲಾದ ಬೆನ್ನಲ್ಲೇ ದೇಶ ಬಿಟ್ಟು ಹೋಗಿದ್ರು, ಇಲ್ಲಿ ವಿಳಂಬದ ವಿಚಾರ ಇಲ್ಲ. ಪ್ರಜ್ವಲ್ ಜಾಮೀನು ಅರ್ಜಿ ವಜಾಗೊಳಿಸುವಂತೆ ಎಸ್ಪಿಪಿ ಪ್ರೊ. ಕುಮಾರ್ ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಜುಲೈ 2ಕ್ಕೆ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ : ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳ ಕುರಿತ ಪತ್ರ ವೈರಲ್ – ಎಸ್ಪಿ ಭೇಟಿಗೆ ಬಂದ ವಕೀಲರ ನಿಯೋಗ!
