ಡಾಲಿ ಧನಂಜಯ್ ಮದುವೆಗೆ ಅಂಚೆ ಇಲಾಖೆಯಿಂದ ಸ್ಪೆಷಲ್ ಗಿಫ್ಟ್.. ಮದುಮಗ ಫುಲ್ ಖುಷ್‌!

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್-ಧನ್ಯತಾ ಮದುವೆಗೆ ಮೈಸೂರಲ್ಲಿ ಅದ್ಧೂರಿ ಸೆಟ್ ರೆಡಿಯಾಗುತ್ತಿದೆ. ವಿವಾಹದ ಸಂಭ್ರಮದಲ್ಲಿರುವ ಡಾಲಿ ಧನಂಜಯ್‌ ಸಂತೋಷವನ್ನು ಭಾರತೀಯ ಅಂಚೆ ಇಲಾಖೆ ದುಪ್ಪಟ್ಟು ಮಾಡಿದ್ದು, ಡಾಲಿ ಮದುವೆ ಆಹ್ವಾನ ಪತ್ರಿಕೆಯನ್ನ ಮೆಚ್ಚಿ ವಿಶೇಷ ಉಡುಗೊರೆಯನ್ನು ನವ ಜೋಡಿಗೆ ನೀಡಿದೆ.

ಧನು-ಧನ್ಯ ಮದುವೆಗೆ ಅಂಚೆ ಇಲಾಖೆ ವಿಶೇಷವಾದ 12 ಸ್ಟ್ಯಾಂಪ್ ಮುದ್ರಣ ಮಾಡಿದೆ. ಇದರ ಜೊತೆಗೆ ವಿವಾಹದ ಶುಭಾಶಯ ತಿಳಿಸಿದೆ. ಮೈಸೂರು ಅಂಚೆ ವಿಭಾಗ ಅಧಿಕಾರಿಗಳು ನಿನ್ನೆ ಡಾಲಿ ಧನಂಜಯ್‌ಗೆ ವೆಡ್ಡಿಂಗ್ ವಿಷ್ ಹಾಗೂ ಶುಭ ವಿವಾಹ ಎಂಬ ಮುದ್ರಣದ ವಿಶೇಷ ಸ್ಟ್ಯಾಂಪ್ ಉಡುಗೊರೆ ನೀಡಿದ್ದಾರೆ.

ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆಗೆ ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿ ಗಣ್ಯರಿಗೆ ಹಂಚಿದ್ದರು. ನಿಮ್ಮ ಈ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ‌. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು ಎಂದು ಅಂಚೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅಂಚೆ ಇಲಾಖೆ ನೀಡಿದ ಈ ಉಡುಗೊರೆಗೆ ಧನಂಜಯ-ಧನ್ಯತಾ ಜೋಡಿ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಫೆಬ್ರವರಿ 16ನೇ ತಾರೀಕು ಎಂದರೆ ಭಾನುವಾರ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆಯಾಗಲಿದ್ದಾರೆ. ಅದ್ಧೂರಿಯಾಗಿ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ ನಡೆಯಲಿದ್ದು, ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

Btv Kannada
Author: Btv Kannada

Read More

Read More