ಕೃಷಿ ಸಚಿವರ ತವರೂರಲ್ಲೇ ಸರ್ಕಾರಿ ಆಸ್ಪತ್ರೆ ಡಾಕ್ಟರ್​ನ ಪ್ರೈವೇಟ್ ಕ್ಲಿನಿಕ್ ದಂಧೆ – ವೈದ್ಯನ ‘ಧನ’ಧಾಹಕ್ಕೆ ರೋಗಿಗಳು ಹೈರಾಣು!

ಮಂಡ್ಯ : ಕೃಷಿ ಸಚಿವರ ತವರೂರಲ್ಲೇ ಸರ್ಕಾರಿ ಆಸ್ಪತ್ರೆ ವೈದ್ಯನ ಪ್ರೈವೇಟ್ ಕ್ಲಿನಿಕ್ ದಂಧೆ ನಡೆದಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಪ್ರಶಾಂತ್ ಸರ್ಕಾರಿ ಆಸ್ಪತ್ರೆಯ ಸಂಬಳ ತೆಗೆದುಕೊಂಡು ಪ್ರೈವೇಟ್ ಕ್ಲಿನಿಕ್​ನಲ್ಲಿ ಕೆಲಸ ಮಾಡ್ತಿದ್ದಾನೆ. ವೈದ್ಯನ ಧನಧಾಹಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಹೈರಾಣಾಗಿದ್ದಾರೆ.

ಹಣ ಕೊಟ್ರೆ ಮಾತ್ರ ಪ್ರೈವೇಟ್ ಕ್ಲಿನಿಕ್​ನಲ್ಲಿ ಡಾ. ಪ್ರಶಾಂತ್ ಟ್ರೀಟ್ಮೆಂಟ್ ಕೊಡ್ತಾನೆ, ಎರಡು ಕಡೆ ಕೆಲಸ ಮಾಡ್ತಿರೋದ್ನ ಜನರು ಪ್ರಶ್ನೆ ಮಾಡಿದ್ರೆ ಈ ವೈದ್ಯ ಸೇವೆ ಮಾಡ್ತಿದ್ದೀನಿ ಅಂತಾನೆ. ಸರ್ಕಾರಿ ಆಸ್ಪತ್ರೆಯ ಕೆಲಸದ ಅವಧಿಯಲ್ಲಿ ಈತ ಅಲ್ಲೂ ಇರ್ತಾನೆ ಹಣಕ್ಕಾಗಿ ಇಲ್ಲೂ ಬಂದು ಸೇವೆ ಮಾಡ್ತಾನೆ. ಡಾ. ಪ್ರಶಾಂತ್ ಲಕ್ಷ ಲಕ್ಷ ಸಂಬಳ ಕೊಡೋ ಸರ್ಕಾರಿ ಸೇವೆಗೆ ಕಳ್ಳಾಟವಾಡ್ತಿದ್ದಾನೆ.

ಡಾ. ಪ್ರಶಾಂತ್ ಸೇವೆ ಹೆಸರಿಲ್ಲಿ ಆಸ್ಪತ್ರೆ ಸನಿಹವೇ ವಿನಾಯಕ ಪಾಲಿ ಕ್ಲಿನಿಕ್ ತೆರೆದು ಪುಂಡಾಟ ಮಾಡ್ತಿದ್ದಾನೆ. ಈ ಬಗ್ಗೆ ಸತ್ಯ ಗೊತ್ತಿದ್ರೂ ಮೇಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಸಚಿವರು ಕೂಡ ಕಂಡು ಕಾಣದಂತಿದ್ದಾರೆ. ವೈದ್ಯನ ಧನ ದಾಹದ ಕಳ್ಳಾಟಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾದು ಕಾದು ಹೈರಾಣಾಗಿದ್ದಾರೆ.

ಇದನ್ನೂ ಓದಿ : ಸಂಸದ ಬಸವರಾಜ್ ಬೊಮ್ಮಾಯಿಗೆ ರಿಲೀಫ್ – ಶಿಗ್ಗಾಂವಿ, ಸವಣೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್!

Btv Kannada
Author: Btv Kannada

Read More