ಸಂಸದ ಬಸವರಾಜ್ ಬೊಮ್ಮಾಯಿಗೆ ರಿಲೀಫ್ – ಶಿಗ್ಗಾಂವಿ, ಸವಣೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್!

ಬೆಂಗಳೂರು : ವಕ್ಫ್ ಮಂಡಳಿ ರೈತರ ಜಮೀನು ಕಬಳಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಶಿಗ್ಗಾಂವಿ ಸಂಸದ ಬಸವರಾಜ್​​ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಮತ್ತು ಸವಣೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೋಮುದ್ವೇಷ ಪ್ರಕರಣವನ್ನು ಇದೀಗ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿ ಹಾವೇರಿ ಜಿಲ್ಲೆಯ ಸವಣೂರು ಮತ್ತು ಶಿಗ್ಗಾಂವಿ ಠಾಣೆಗಳಲ್ಲಿ 2024ರಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಬಸವರಾಜ ಬೊಮ್ಮಾಯಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆಯನ್ನು ನಡೆಸಿ ನ್ಯಾಯಮೂರ್ತಿ ಎಸ್‌. ಆರ್. ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ಪ್ರಕರಣಗಳನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಬೊಮ್ಮಾಯಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ವಾದ ಮಾಡಿಸಿದ್ದು,  ಎಲ್ಲಿ ಕಲ್ಲು ಬೀಳುತ್ತೋ ಅದೆಲ್ಲವೂ ವಕ್ಫ್ ಆಸ್ತಿ ಎಂದಷ್ಟೇ ಬೊಮ್ಮಾಯಿ ಹೇಳಿದ್ದಾರೆ. ಇಲ್ಲಿ ಕೋಮು ಧ್ವೇಷದ ಅರ್ಥದಲ್ಲಿ ಹೇಳಿಲ್ಲ ಎಂದು ವಾದ ಮಂಡಿಸಿದ್ದಾರೆ.

ಬೊಮ್ಮಾಯಿ ಪರ ಆದೇಶದ ಬಗ್ಗೆ ಗಮನಹರಿಸಲು ಹೈಕೋರ್ಟ್​ಗೆ ಎಸ್ಪಿಪಿ ಜಗದೀಶ್ ಅವರು ಮನವಿ ಮಾಡಿದ್ದು, ಬೊಮ್ಮಾಯಿ ಪರ ಮಾಡುವ ಆದೇಶ ಬೇರೆ ಆರೋಪಿಗಳಿಗೆ ಅನ್ವಯ ಆಗಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ :5 ಹುಲಿಗಳ ಅನುಮಾನಾಸ್ಪದ ಸಾವು ಪ್ರಕರಣ – ತಾಯಿ ಹುಲಿ ಮರಣೋತ್ತರ ಪರೀಕ್ಷೆ ಮುಕ್ತಾಯ.. ವಿಷವಿಟ್ರಾ ಪಾಪಿಗಳು? 

Btv Kannada
Author: Btv Kannada

Read More