ತುಮಕೂರು : ನೊಣವಿನಕೆರೆ ಕಾಡಸಿದ್ದೇಶ್ವರ ಮಠ ಹಾಗೂ ಶ್ರೀಗಳ ಹೆಸರಲ್ಲಿ ಭಾರೀ ಹಣ ವಸೂಲಿ ಮಾಡಲಾಗುತ್ತಿದೆ. ಇದೀಗ ಈ ಕುರಿತು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಗಳು ಸ್ಪಷ್ಟನೆ ನೀಡಿದ್ದು, ಎಲ್ಲರಿಗೂ ಎಚ್ಚರಿಕೆಯಲ್ಲಿರುವಂತೆ ಕಿವಿಮಾತು ಹೇಳಿದ್ದಾರೆ.
ಶ್ರೀ ಕ್ಷೇತ್ರ ನೊಣವಿನಕೆರೆ ಕಾಡಸಿದ್ದೇಶ್ವರ ಕ್ಷೇತ್ರದ ಶ್ರೀಗಳು ಎಲ್ಲೂ ಯಾರಲ್ಲೂ ಹೋಗಿ ಭೀಕ್ಷಾಟನೆಯನ್ನ ಮಾಡಿಲ್ಲ. ಯಾರ ಮನೆಗೂ ಹೋಗಿ ರಸೀದಿ ಬುಕ್ ಹಿಡಿದು ಹಣಕಾಸು ಕೇಳಿಲ್ಲ. ಭಕ್ತರು ತಮ್ಮ ಪ್ರೀತಿ ವಿಶ್ವಾಸದ ಮೇಲೆ ಬಂದು ಶ್ರೀ ಮಠದ ಅಭಿವೃದ್ದಿಗೆ ಶ್ರೀ ಮಠದ ಮಕ್ಕಳಾಗಿ ಸೇವೆ ಮಾಡ್ತಿದ್ದಾರೆ.
ಶ್ರೀ ಮಠದ ಭಕ್ತಾದಿಗಳು, ಉತ್ತರಾಧಿಕಾರಿಗಳು ಅಂತ ಹೇಳಿ ಈಗೀಗಾ ಅಲ್ಲಲ್ಲಿ ನೋಣವಿನಕೆರೆ ಮಠ ಹಾಗೂ ಶ್ರೀಗಳ ಹೆಸರಿನಲ್ಲಿ ಹಣವನ್ನು ವಸೂಲಿ ಮಾಡ್ತಿದ್ದಾರೆ. ಭಕ್ತಾದಿಗಳು ಇದ್ಯಾವುದಕ್ಕೂ ಮನಸ್ಸು ಕೊಡದೆ. ನೀವೇ ಸ್ವ ಇಚ್ಛೆಯಿಂದ ಮಠಕ್ಕೆ ಬಂದು ಗುರುಗಳ ದರ್ಶನ, ಆಶೀರ್ವಾದ ಪಡೆದು ಮುಂದುವರೆಯರಿ ಎಂದು ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.
ತಪ್ಪು ಕಲ್ಪನೆ, ಕೆಟ್ಟ ಭಾವನೆಉಳ್ಳಂತಹ, ಮದ್ಯದಲ್ಲಿ ಕಾವಿದಾರಿಗಳು ಆಗಾಗಾ ಬಂದು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಮಠದ ಗುರುಗಳ ಆಶೀರ್ವಾದ ಇದೆ ಎಂದು ನಿಂಬೆಹಣ್ಣು ತಂದು ಕೊಡುವುದು, ಹಾಕೋದು ಮಾಡ್ತಾ ಇದ್ದಾರೆ. ಇದ್ಯಾವುದಕ್ಕೂ ಅವಕಾಶವಿಲ್ಲ. ಶ್ರೀಗಳು ಅಕ್ಷತೆ ಒಂದನ್ನು ಬಿಟ್ಟು ಇನ್ಯಾವುದನ್ನು ಮಾಡಲ್ಲ. ಇದಾವುದಕ್ಕೂ ಅವಕಾಶವಿಲ್ಲ. ಆ ರೀತಿಯ ಜನಗಳು ಬಂದರೆ ದಂಡನೇ ಮಾಡಿ ಸರಿಯಾದ ಶಿಕ್ಷೆ ಕೊಡಿ. ಮಠದ ಭಕ್ತರು ಮಠಕ್ಕೆ ಬಂದೇ ಸೇವೆ ಸಲ್ಲಿಸಿ ಎಂದು ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ವಾರ್ಷಿಕ ಸಭೆ!
